ಬ್ರಿಟನ್ ಜನತೆಗೆ ವಲಸಿಗರ ಪೈಕಿ ಭಾರತೀಯರೇ ಅಚ್ಚುಮೆಚ್ಚು! 
ವಿದೇಶ

ಬ್ರಿಟನ್ ಜನತೆಗೆ ವಲಸಿಗರ ಪೈಕಿ ಭಾರತೀಯರೇ ಅಚ್ಚುಮೆಚ್ಚು!

ಬ್ರಿಟನ್ ನಲ್ಲಿರುವ ಪ್ರಜೆಗಳು ವಲಸಿಗರ ಪೈಕಿ ಭಾರತೀಯರ ಬಗ್ಗೆಯೇ ಹೆಚ್ಚು ಒಲವು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಲಂಡನ್: ಬ್ರಿಟನ್ ನಲ್ಲಿರುವ ಪ್ರಜೆಗಳು ವಲಸಿಗರ ಪೈಕಿ ಭಾರತೀಯರ ಬಗ್ಗೆಯೇ ಹೆಚ್ಚು ಒಲವು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. 
ಯುಗೋವ್ ಪೋಲ್(YouGov poll) ಇತ್ತೀಚೆಗಷ್ಟೇ ನಡೆಸಿದ ಸಮೀಕ್ಷೆಯ ಪ್ರಕಾರ, ಬ್ರಿಟನ್ ಪ್ರಜೆಗಳಿಗೆ ಭಾರತೀಯರೇ ಅತ್ಯಂತ ನೆಚ್ಚಿನ ವಲಸಿಗರಾಗಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಏಷ್ಯಾ ಸಮುದಾಯಗಳ ಪೈಕಿ  ಪಾಕಿಸ್ತಾನಿಯರು, ಬಾಂಗ್ಲಾದೇಶದವರಿಗಿಂತ ಭಾರತೀಯರ ಬಗ್ಗೆಯೇ ಬ್ರಿಟನ್ ಪ್ರಜೆಗಳಿಗೆ ಹೆಚ್ಚಿನ ಒಲವಿದೆ ಎಂಬುದು ಸಮೀಕ್ಷೆ ಮೂಲಕ ದೃಢಪಟ್ಟಿದೆ. 
ಏಪ್ರಿಲ್ ನಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ಕನಿಷ್ಠ 1,668 ಬ್ರಿಟನ್ ಪ್ರಜೆಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡಲಾಗಿದ್ದು, ವಲಸಿಗರು ಬ್ರಿಟನ್ ಗೆ ನೀಡಿರುವ ಕೊಡುಗೆಗಳ ಬಗ್ಗೆ ಹಾಗೂ ಅದರಿಂದ ಬ್ರಿಟನ್ ದೇಶದ ಮೇಲೆ ಉಂಟಾಗಿರುವ ಪರಿಣಾಮಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. 
ಬ್ರಿಟನ್ ಗೆ ಸಕಾರಾತ್ಮಕ ರೀತಿಯಲ್ಲಿ ಕೊಡುಗೆ ನೀಡಿರುವ ವಲಸಿಗರ ಪೈಕಿ ಭಾರತೀಯರೇ ಮುಂಚೂಣಿಯಲ್ಲಿದ್ದು, ಈ ಕಾರಣಕ್ಕಾಗಿ ಬ್ರಿಟನ್ ನ ಜನತೆ ಭಾರತೀಯರ ಬಗ್ಗೆ ಅತಿ ಹೆಚ್ಚು ಒಲವು ಹೊಂದಿದ್ದಾರೆ.  ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ಬ್ರಿಟನ್ ಜನತೆ ಋಣಾತ್ಮಕ ಅಂಕಗಳನ್ನು ನೀಡಿದ್ದಾರೆ. ಬ್ರಿಟನ್ ನಲ್ಲಿ ವಲಸಿಗರ ಬಗ್ಗೆ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!