ವಿದೇಶ

ಹಣ ವರ್ಗಾವಣೆ ಪ್ರಕರಣ: ಮಾಜಿ ಪ್ರಧಾನಿ ನವಾಜ್ ಶರೀಫ್ ವಿರುದ್ಧ ತನಿಖೆಗೆ ಪಾಕಿಸ್ತಾನ ಆದೇಶ

Nagaraja AB

ಇಸ್ಲಾಮಾಬಾದ್ : ಭಾರತಕ್ಕೆ 4.9 ಬಿಲಿಯನ್ ಅಮೆರಿಕನ್ ಡಾಲರ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಮಾಜಿ ಪ್ರಧಾನಿ ನವಾಜ್ ಶರೀಫ್ ವಿರುದ್ಧ ತನಿಖೆಗೆ ಪಾಕಿಸ್ತಾನ ರಾಷ್ಟ್ರೀಯ ಹೊಣೆಗಾರಿಕೆ ದಳ -ಎನ್ ಎಬಿ ಆದೇಶಿಸಿದೆ.

ಪಾಕಿಸ್ತಾನದಿಂದ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಹಣ ವರ್ಗಾವಣೆಯಾದ ನಂತರ ಭಾರತೀಯ ವಿದೇಶಿ ವಿನಿಮಯ ಮೀಸಲು ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಪಾಕಿಸ್ತಾನ  ತೊಂದರೆ ಅನುಭವಿಸಿದೆ ಎಂದು ಎನ್ ಎಬಿ ಮಾಹಿತಿ ನೀಡಿದೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ.

ಈ ಘಟನೆಯನ್ನು ವಿಶ್ವಬ್ಯಾಂಕಿನ ವಲಸೆ ಮತ್ತು ರವಾನೆ ಪುಸ್ತಕ 2016ರಲ್ಲಿ ನಮೂದಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದಾಗ್ಯೂ, ಮಾಧ್ಯಮಗಳ ವರದಿ ಆಧಾರದ ಮೇಲೆ  ಎನ್ ಎಬಿ ತನಿಖೆಗೆ ಆದೇಶಿಸಲಾಗಿದೆ. ಆದರೆ, ಇದು ಅಧಿಕೃತವಲ್ಲ ಎಂಬ ಅಂಶ ತಿಳಿದುಬಂದಿದೆ.

ಬಹುಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ  ನವಾಜ್ ಷರೀಫ್, ಪುತ್ರ ಹಸನ್ ಮತ್ತು ಹುಸೈನ್, ಪುತ್ರಿ ಮಾರ್ಯಾಮ್,  ಅಳಿಯ  ಮೊಹಮ್ಮದ್ ಸಪ್ದರ್   ಹೊಣೆಗಾರಿಕೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಕಳೆದ ವರ್ಷ ಜುಲೈ 28 ರಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್, ಪ್ರಧಾನಮಂತ್ರಿ ಕಚೇರಿಯನ್ನು ಹಿಡಿದಿಟ್ಟುಕೊಳ್ಳದಂತೆ ಶರೀಫ್ ಅವರನ್ನು ಅನರ್ಹಗೊಳಿಸಿತು. ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಶರೀಫ್ ಕುಟುಂಬದ ವಿರುದ್ಧ ದಾಖಲೆಗಳನ್ನು ಹಾಜರುಪಡಿಸುವಂತೆ  ಎನ್ ಎಬಿಗೆ ಆದೇಶಿಸಿತ್ತು

ಶರೀಫ್ ಕುಟುಂಬಕ್ಕೆ ಸೇರಿರುವ ಅಲ್ ಅಜಿಜಿಯಾ ಸ್ಟೀಲ್ ಮಿಲ್ಸ್,  ಪ್ಲಾಗ್ ಸಿಪ್ ಹೂಡಿಕೆ ಕಂಪನಿ, ಲಂಡನ್ ನಲ್ಲಿ ಅವೆನ್ ಪೀಲ್ಡ್ ಪ್ರಾಪರ್ಟಿಸ್ ಸೇರಿದಂತೆ ಹಲವು  ಕಂಪನಿಗಳ  ದಾಖಲೆಗಳನ್ನು ಮುಂದಿಡುವಂತೆ ಸೂಚಿಸಲಾಗಿತ್ತು.

SCROLL FOR NEXT