ಬೀಜಿಂಗ್: ಚೀನಾದಲ್ಲಿರುವ ಎಲ್ಲಾ ಮಸೀದಿಗಳೂ ರಾಷ್ಟ್ರಧಜವನ್ನು ಕಡ್ಡಾಯವಾಗಿ ಹಾರಿಸಬೇಕೆಂದು ಚೀನಾದ ಇಸ್ಲಾಮಿಕ್ ಸಂಸ್ಥೆ ಆದೇಶ ಹೊರಡಿಸಿದೆ.
ಮಸೀದಿಗಳಲ್ಲಿ ರಾಷ್ಟ್ರಧ್ವಜ ಹಾರಿಸುವುದರ ಜೊತೆಗೆ ಸಮಾಜವಾದದ ಮೂಲ ಮೌಲ್ಯಗಳ ಅಧ್ಯಯನವನ್ನೂ ಮಾಡಬೇಕೆಂದು ಚೀನಾದ ಇಸ್ಲಾಮಿಕ್ ಸಂಸ್ಥೆ ಕಟ್ಟಪ್ಪಣೆ ವಿಧಿಸಿರುವ ಬಗ್ಗೆ ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಪ್ರಕಟಿಸಿದೆ. ರಾಷ್ಟ್ರವಾದವನ್ನು ಬೆಂಬಲಿಸಿ ರಾಷ್ಟ್ರ ಭಕ್ತಿಯ ಚೈತನ್ಯವನ್ನು ಮುಂದೆಕೊಂಡೊಯ್ಯುವುದಕ್ಕೆ ಈ ರೀತಿಯ ಆದೇಶ ಹೊರಡಿಸಲಾಗಿದೆ ಎಂದು ಚೀನಾ ಪತ್ರಿಕೆ ವಿಶ್ಲೇಷಿಸಿದೆ.
ಚೀನಾದ ಇಸ್ಲಾಮಿಕ್ ಸಂಸ್ಥೆಯ ಆದೇಶಕ್ಕೆ ಅಲ್ಲಿನ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ನಿರ್ಧಾರ ಧಾರ್ಮಿಕ ಅಭಿವೃದ್ಧಿಗೆ ಸಹಕಾರಿಯಾದದ್ದು ಎಂದು ಹೇಳಿದ್ದಾರೆ.