ವಿದೇಶ

ಮಹಿಂದ ರಾಜಪಕ್ಸೆ ಪಕ್ಷ ಸೇರಿದ ಲಂಕಾ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್ಶನ್

Lingaraj Badiger
ಕೊಲಂಬೊ: ಶ್ರೀಲಂಕಾ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್ಶನ್ ಅವರು ಬುಧವಾರ ಬಹುಮತ ಕಳೆದುಕೊಂಡ ಮಹಿಂದ ರಾಜಪಕ್ಸೆ ಅವರ ಶ್ರೀಲಂಕಾ ಪೀಪಲ್ಸ್ ಪಾರ್ಟಿ(ಎಸ್ಎಲ್ ಪಿಪಿ) ಸೇರಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ, 42 ವರ್ಷದ ದಿಲ್ಶನ್ ಅವರು ಎಸ್ಎಲ್ ಪಿಪಿ ಸದಸ್ಯತ್ವ ಪಡೆಯುವ ಮೂಲಕ ರಾಪಕ್ಸೆ ಅವರ ನೂತನ ಪಕ್ಷ ಸೇರಿದ್ದಾರೆ ಎಂದು ಪಕ್ಷದ ಕಾರ್ಯದರ್ಶಿ ಸಗರ ಕರಿಯವಾಸಮ್ ಅವರು ತಿಳಿಸಿದ್ದಾರೆ.
ದಿಲ್ಶನ್ ಅವರು ಶ್ರೀಲಂಕಾದ ನೈಋತ್ಯ ಕಲುತಾರ ಜಿಲ್ಲೆಯಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಳೆದ ತಿಂಗಳು 26ರಂದು ಅಧ್ಯಕ್ಷ ಮೈತ್ರಿ ಪಾಲ್ ಸಿರಿಸೇನಾ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯಾಗಿ ನೇಮಕ ಮಾಡಿದ್ದರು. ಆದರೆ ರಾಜಪಕ್ಸೆ ಅವರು ಇಂದು ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದಾರೆ.
SCROLL FOR NEXT