ಸಾಂದರ್ಭಿಕ ಚಿತ್ರ 
ವಿದೇಶ

ಎಲ್ಟಿಟಿಇ ಹೋರಾಟ: ಶ್ರೀಲಂಕಾ ಅತಿದೊಡ್ಡ ಸಾಮೂಹಿಕ ಸಮಾಧಿ ಸ್ಥಳದಲ್ಲಿ 230 ಅಸ್ಥಿಪಂಜರಗಳು ಪತ್ತೆ!

ಶ್ರೀಲಂಕಾದ ಮನ್ನಾರ್ ಪಟ್ಟಣದಲ್ಲಿ ಈ ವರ್ಷಾರಂಭದಿಂದ ಇಂದಿನವರೆಗೆ ಸುಮಾರು 230 ಕ್ಕಿಂತ ಹೆಚ್ಚು ಅಸ್ಥಿಪಂಜರಗಳನ್ನು ಪತ್ತೆ ಹಚ್ಚಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ....

ಕೊಲಂಬೋ: ಶ್ರೀಲಂಕಾದ ಮನ್ನಾರ್ ಪಟ್ಟಣದಲ್ಲಿ ಈ ವರ್ಷಾರಂಭದಿಂದ ಇಂದಿನವರೆಗೆ ಸುಮಾರು 230 ಕ್ಕಿಂತ ಹೆಚ್ಚು ಅಸ್ಥಿಪಂಜರಗಳನ್ನು ಪತ್ತೆ ಹಚ್ಚಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿರುವುದು ದ್ವೀಪರಾಷ್ಟ್ರದ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.
ಮುಖ್ಯ ಬಸ್ ಡಿಪೋ ಸಮೀಪ ಕಳೆದ ಆಗಸ್ಟ್ ನಲ್ಲಿ ಹೊಸ ಕಟ್ಟಡಕ್ಕಾಗಿ ಅಡಿಪಾಯ ತೋಡುವ ವೇಳೆ ಅಲ್ಲಿನ ಕಾರ್ಮಿಕರು ಮಾನವ ಅವಶೇಷಗಳನ್ನು ಪತ್ತೆ  ಮಾಡಿದ್ದರು. ಇದಾದ ಬಳಿಕ ಈ ಸುತ್ತಮುತ್ತಲ ಸ್ಥಳಗಳ ವಿವರವಾದ ಉತ್ಖನನ ನಡೆಸುವಂತೆ ಕೋರ್ಟ್ ಆದೇಶವಿತ್ತು ಎಂದು ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಇನ್ನು ಇಲ್ಲಿ ಸತ್ತವರು ಯಾರು? ಹೇಗೆ ಸತ್ತರೆನ್ನುವ ಯಾವ ವಿವರಗಳು ಇನ್ನೂ ಲಭ್ಯವಾಗಿಲ್ಲ.
"ನಾವು ಇಲ್ಲಿಯವರೆಗೆ 230 ಕ್ಕೂ ಹೆಚ್ಚು ಅಸ್ಥಿಪಂಜರಗಳನ್ನು ಪತ್ತೆ ಮಾಡಿದ್ದೇವೆ" ಎಂದು ಕೊಲಂಬೋ ನ ಯೂನಿವರ್ಸಿಟಿ ಆಫ್ ಕೆಲನಿಯದ ಪ್ರಾಧ್ಯಾಪಕ ರಾಜ್ ಸೋಮದೇವ ಬಿಬಿಸಿಗೆ ವಿವರಿಸಿದ್ದಾರೆ.
"ಇದು ನನ್ನ ಅನುಭವದ ಪ್ರಕಾರ ಇದುವರೆಗೆ ಅಗೆದು ತೆಗೆದ ಅತಿ ದೊಡ್ಡ ಸಮಾಧಿ ಸ್ಥಳ" ಎಂದು ಅವರು ಹೇಳಿದ್ದಾರೆ.
ಉತ್ಖನನದ ವೇಳೆ ಕೇವಲ ಮೃತರ ಅಸ್ಥಿಪಂಜರಗಳನ್ನು ಮಾತ್ರವಲ್ಲದೆ ಅವರು ಧರಿಸಿದ್ದ ಕೆಲವು ಆಭರಣಗಳು, ಪಿಂಗಾಣಿ, ಸಿರಾಮಿಕ್ ಹಾಗೂ ಇತರೆ ಕೆಲ ಲೋಘದ ವಸ್ತುಗಳು ಸಹ ದೊರಕಿದೆ. "ಮೂಳೆಗಳು ಚದುರಿದ ಅಥವಾ ಬಿಡಿ ಬಿಡಿಯಾಗಿದ್ದ ಕಾರಣ ದೇಹದ ಗುರುತು ಪತ್ತೆ ಮಾಡುವುದು ಕಠಿಣವಾಗಲಿದೆ. ಅಲ್ಲದೆ ಕೆಲ ಎಲುಬುಗಳು ನಾಪತ್ತೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಮನ್ನಾರ್ ಪಟ್ಟಣವು ಜನಾಂಗೀಯ ಅಲ್ಪಸಂಖ್ಯಾತ ತಮಿಳರ ಪ್ರಾಬಲ್ಯ ಹೊಂದಿದೆ  ಇಲ್ಲಿನ ಪ್ರಮುಖರು  ಶ್ರೀಲಂಕಾದ ಭದ್ರತಾ ಪಡೆಗಳು ಮತ್ತು ತಮಿಳ್ ಟೈಗರ್ಸ್ ನಡುವೆ ದಶಕಗಳ ಕಾಲ ಸಂಘರ್ಷ ನಡೆದಿತ್ತು. ಈ ವೇಳೆ ಅನೇಕರು ಕಾಣೆಯಾಗಿದ್ದರು.
ನಾಗರಿಕ ಯುದ್ಧದ ಸಮಯದಲ್ಲಿ ಮನ್ನಾರ್ ಹೆಚ್ಚಾಗಿ ಸೈನ್ಯದ ನಿಯಂತ್ರಣದಲ್ಲಿ ಇದ್ದಾಗ ತಮಿಳು ಟೈಗರ್ ಬಂಡುಕೋರರು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಜಿಲ್ಲೆಯ ಹಲವು ಭಾಗಗಳಲ್ಲಿ ಪ್ರಾಬಲ್ಯ ಹೊಂದಿದ್ದರು.10 ವರ್ಷಗಳ ಹಿಂದೆ ಕೊನೆಗೊಂಡ ಉಗ್ರ ಯುದ್ಧಗಳ ನಂತರ ಮಿಲಿಟರಿ ಇಡೀ ಜಿಲ್ಲೆಯನ್ನು ವಶಪಡಿಸಿಕೊಂಡಿತು. ಸಂಘರ್ಷ ಕೊನೆಗೊಂಡ ನಂತರ ಶ್ರೀಲಂಕಾದ  ಹಲವು ಭಾಗಗಳಲ್ಲಿ ಸಾಮೂಹಿಕ ಸಮಾಧಿ ಸ್ಥಳಗಳು ಪತ್ತೆಯಾಗಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

1st ODI: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಸಚಿನ್ ತೆಂಡೂಲ್ಕರ್, ಸಂಗಕ್ಕಾರ ದಾಖಲೆ ಮುರಿದ Virat Kohli

SCROLL FOR NEXT