ಸಂಗ್ರಹ ಚಿತ್ರ 
ವಿದೇಶ

ಪೋಷಕರ ತೆರಿಗೆ ವಂಚನೆಗೆ ಡೊನಾಲ್ಡ್ ಟ್ರಂಪ್ ನೆರವು?: ವರದಿ

ಭಾರತವನ್ನು ಸುಂಕಗಳ ರಾಜ ಎಂದು ಟೀಕಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಪೋಷಕರ ಸಾವಿರಾರು ಕೋಟಿ ರೂ.ತೆರಿಗೆ ವಂಚನೆಗೆ ನೆರವು ನೀಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವಾಷಿಂಗ್ಟನ್: ಭಾರತವನ್ನು ಸುಂಕಗಳ ರಾಜ ಎಂದು ಟೀಕಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಪೋಷಕರ ಸಾವಿರಾರು ಕೋಟಿ ರೂ.ತೆರಿಗೆ ವಂಚನೆಗೆ ನೆರವು ನೀಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮೂಲಗಳ ಪ್ರಕಾರ 1990ರಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಸಂಶಾಯಾಸ್ಪದ ತೆರಿಗೆ ಅಕ್ರಮಗಳಿಗೆ ಸಂಬಂಧಿಸಿದಂತೆ ಅಂದಿನ ಅಮೆರಿಕದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಫ್ರೆಡ್ ಟ್ರಂಪ್ ಅವರ ಸಾವಿರಾರು ಕೋಟಿ ತೆರಿಗೆ ವಂಚನೆ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್ ನೆರವು ನೀಡಿದ್ದರು ಎಂದು ಅಮೆರಿಕದ ಖ್ಯಾತ ಸುದ್ದಿ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಟಿಸಿದೆ. ಈ ಬಗ್ಗೆ ಹಲವು ಕಾರ್ಯಕ್ರಮಗಳಲ್ಲಿ ಸ್ವತಃ ಟ್ರಂಪ್ ಹೇಳಿಕೆ ನೀಡಿದ್ದು, ತಮ್ಮ ತಂದೆಯಿಂದ ತಾವು ಆರ್ಥಿಕ ನೆರವು ಪಡೆದಿದ್ದಾಗಿ ಹೇಳಿಕೆ ನೀಡಿದ್ದರು.
ಇದಕ್ಕೆ ಇಂಬು ನೀಡುವಂತೆ ಟ್ರಂಪ್ ಪರ ವಕೀಲ ಮೈಕೆಲ್‌ ಕೋಹೆನ್‌ ಟ್ರಂಪ್‌ ಅವರ ಪರವಾಗಿ ತಾವು ತೆರಿಗೆ ವಂಚನೆ ಮಾಡಿರುವುದನ್ನು, ಬ್ಯಾಂಕ್‌ ಸ್ಟೇಟ್‌ಮೆಂಟ್‌ ಕುರಿತು ಸುಳ್ಳು ಮಾಹಿತಿ ನೀಡಿರುವುದನ್ನು, ಪ್ರಚಾರಕ್ಕೆ ಬಳಸಿದ ಹಣದ ಲೆಕ್ಕಪತ್ರದಲ್ಲಿ ವಂಚನೆ ಮಾಡಿರುವುದನ್ನು ಒಪ್ಪಿಕೊಂಡಿದ್ದರು. ಇನ್ನು ಟ್ರಂಪ್ ತಮ್ಮ ಮೂರನೇ ವರ್ಷದಲ್ಲೇ ತಮ್ಮ ತಂದೆ ಮಾಡಿದ್ದ ಆಸ್ತಿಯಿಂದಾಗಿ ವಾರ್ಷಿಕ 200, 000 ಡಾಲರ್ ಆದಾಯ ಪಡೆಯುತ್ತಿದ್ದರು. ತಮ್ಮ 8ನೇ ವರ್ಷದಲ್ಲಿ ಟ್ರಂಪ್ ಮಿಲಿಯನೇರ್ ಆಗಿದ್ದರು. ಕಾಲೇಜು ದಿನಗಳಲ್ಲೇ ಟ್ರಂಪ್ ವಾರ್ಷಿಕ 1 ಮಿಲಿಯನ್ ಡಾಲರ್ ಹಣವನ್ನು ತನ್ನ ತಂದೆಯಿಂದ ಪಡೆಯುತ್ತಿದ್ದರು. ಅವರ 40 ಮತ್ತು 50ನೇ ವಯಸ್ಸಿನಲ್ಲಿ ಈ ಪ್ರಮಾಣ 5 ಮಿಲಿಯನ್ ಡಾಲರ್ ಗೆ ಏರಿಕೆಯಾಗಿತ್ತು. ಇವಿಷ್ಟೂ ಹಣ ಟ್ರಂಪ್ ತಮ್ಮ ತಂದೆ ಫ್ರೆಡ್ ಟ್ರಂಪ್ ಅವರಿಗೆ ನೆರವು ನೀಡಿದ್ದರಿಂದಲೇ ಬಂದಿತ್ತು ಎಂದು ಪತ್ರಿಕೆ ವರದಿ ಮಾಡಿದೆ. 
ಇನ್ನು ಪತ್ರಿಕೆ ಆರೋಪವನ್ನು ಟ್ರಂಪ್ ಪರ ವಕೀಲರು ತಳ್ಳಿ ಹಾಕಿದ್ದು, ಪತ್ರಿಕೆ ಆರೋಪದಲ್ಲಿ ಹುರುಳಿಲ್ಲ. ಟ್ರಂಪ್ ಯಾವುದೇ ರೀತಿಯ ತೆರಿಗೆ ವಂಚನೆ ಮಾಡಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT