ವಿದೇಶ

ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆ

Nagaraja AB

ನ್ಯೂಯಾರ್ಕ್ : ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆಯಾಗಿದೆ. ಕಣದಲ್ಲಿದ್ದ 18 ರಾಷ್ಟ್ರಗಳ ಪೈಕಿ ಅತ್ಯಧಿಕ ಮತಗಳನ್ನು ಪಡೆದ ಭಾರತವು, ಮಾನವ ಹಕ್ಕುಗಳ ಪ್ರಚಾರ ಮತ್ತು ಮೇಲ್ವಿಚಾರಣೆ ನಡೆಸುವ ಮಂಡಳಿಗೆ ಐದನೇ ಬಾರಿಗೆ ಆಯ್ಕೆಯಾದ ಶ್ರೇಯಕ್ಕೆ ಪಾತ್ರವಾಗಿದೆ.

ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ನಿನ್ನೆ ನಡೆದ ಮತದಾನ ವೇಳೆ 193 ಸದಸ್ಯ  ರಾಷ್ಟ್ರಗಳು ಮತ ಚಲಾಯಿಸಿದವು. ಭಾರತವು ಒಟ್ಟು 188 ಮತಗಳನ್ನು ಪಡೆದುಕೊಂಡಿತು, ಬಾಂಗ್ಲಾದೇಶ 178 ಮತ ಪಡೆಯಿತು.

ಸದ್ಯ 47 ಸದಸ್ಯ ಬಲದ ಮಂಡಳಿಗೆ ಭಾರತವು ಜನವರಿಯಲ್ಲಿ ಸೇರ್ಪಡೆಯಾಗಲಿದ್ದು, ಏಷ್ಯಾ-ಫೆಸಿಪಿಕ್ ಭಾಗದ ಚೀನಾ, ನೇಪಾಳ, ಹಾಗೂ ಪಾಕಿಸ್ತಾನ ಜೊತೆಗೆ ಮುಂದಿನ ಮೂರು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿದೆ.

SCROLL FOR NEXT