ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಲೇಖಕಿ ಅನಾ ಬರ್ನ್ಸ್ ಗೆ ಮ್ಯಾನ್ ಬೂಕರ್ ಗೌರವ

ಲೇಖಕಿ ಅನಾ ಬರ್ನ್ಸ್ ಅವರಿಗೆ ೨೦೧೮ನೇ ಸಾಲಿನ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಲಭಿಸಿದೆ.

ಅನಾ ಬರ್ನ್ಸ್
Raghavendra Adiga
Updated On : 17 Oct 2018, 11:25 am
ಲಂಡನ್: ಲೇಖಕಿ ಅನಾ ಬರ್ನ್ಸ್ ಅವರಿಗೆ 2018ನೇ ಸಾಲಿನ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಲಭಿಸಿದೆ. 
ಉತ್ತರ ಐರ್ಲೆಂಡ್ ನವರಾದ ಅನಾ ಅಲ್ಲಿನ ಕ್ಯಾಥೋಲಿಕ್-ಪ್ರೊಟೆಸ್ಟಂಟ್ ಸಮುದಾಯದ ನಡುವೆ ಸಂಭವಿಸಿದ ಹಿಂಸಾಚಾರ ಕುರಿತ ಘಟನೆಯಾಧರಿಸಿ ರಚಿಸಿದ "ಮಿಲ್ಕ್ ಮ್ಯಾನ್" ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ.
50,000 ಪೌಂಡ್ (66,000 ಅಮೆರಿಕನ್ ಡಾಲರ್) ಮೊತ್ತದ ಬಹುಮಾನ ಪಡೆದ ಉತ್ತರ ಐರ್ಲೆಂಡ್ ನ ಮೊದಲ ಮಹಿಳೆ ಅನಾ ಬರ್ನ್ಸವರಾಗಿದ್ದಾರೆ.

Advertisement

Advertisement

ಐವತ್ತು ವರ್ಷಗಳ ಹಿಂದೆ ಬೂಕರ್ ಪ್ರಶಸ್ತಿ ಸ್ಥಾಪನೆಯಾಗಿದ್ದು ಅನಾ ಬರ್ನ್ಸ್ ಈ ಪ್ರಶಸ್ತಿ ಪಡೆದಿರುವ 17ನೇ ಮಹಿಳೆಯಾಗಿದ್ದಾರೆ.
"ಸಾಂಪ್ರದಾಯಿಕ ಆಲೋಚನೆಗೆ ಸವಾಲೊಡ್ಡುವ ಕಥೆ ಇದಾಗಿದ್ದು ವಿಶಿಷ್ಟವಾದ ಗದ್ಯಶೈಲಿ ಹೊಂದಿರುವ ಇಂತಹಾ ಕಾದಂಬರಿಯನ್ನು ಇದುವರೆಗೆ ನಾವ್ಯಾರೂ ಓದಿರಲಿಲ್ಲ" ಆಯ್ಕೆ ಸಮಿತಿ ಸದಸ್ಯರು ಹೇಳಿದ್ದಾರೆ.
"ಮಿಲ್ಕ್ ಮ್ಯಾನ್" ಒಂದು ಕುಟುಂಬದ ಸಂಬಂಧಗಳನ್ನು, ಸಾಮಾಜಿಕ ಒತ್ತಡ ಮತ್ತು ರಾಜಕೀಯ ದೌರ್ಜನ್ಯ, ಲೈಂಗಿಕ ದಬ್ಬಾಳಿಕೆಯ ಮತ್ತು ಕಿರುಕುಳದ ಹಿನ್ನೆಲೆಯೊಡನೆ ವಿವರಿಸುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments