ಸಾಮಾನ್ಯ ಪ್ರಜೆಯನ್ನು ವಿವಾಹವಾಗಲು ರಾಜಪದವಿಯನ್ನು ತ್ಯಜಿಸಿದ ಜಪಾನ್ ರಾಜಕುಮಾರಿ
ಜಪಾನ್ ನ ರಾಜಕುಮಾರಿ ಅಯಾಕೊ ಸಾಮಾನ್ಯ ಪ್ರಜೆಯನ್ನು ವಿವಾಹವಾಗುವುದಕ್ಕೆ ತಮ್ಮ ರಾಜಪದವಿಯನ್ನೇ ತ್ಯಜಿಸಿದ್ದಾರೆ.
ಕೇಯ್ ಮೊರಿಯಾ ಎಂಬ ಶಿಪ್ಪಿಂಗ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಸಾಮಾನ್ಯ ಪ್ರಜೆಯನ್ನು ಪ್ರೀತಿಸುತ್ತಿದ್ದರು. ಜಪಾನ್‌ನ ರಾಜಮನೆತನದವರು ರಾಜಮನೆತನದವರ ಹೊರತಾಗಿ ಸಾಮಾನ್ಯರನ್ನು ಮದುವೆಯಾದರೆ ರಾಜ ಪದವಿಯನ್ನು ತ್ಯಜಿಸಬೇಕು. ಈ ಹಿನ್ನೆಲೆಯಲ್ಲಿ
ಕೇಯ್ ಮೊರಿಯಾವರನ್ನು ವಿವಾಹವಾಗುತ್ತಿರುವ ರಾಜಕುಮಾರಿ ಅಯಾಕೊ ತಮ್ಮ ರಾಜಕುಮಾರಿ ಪದವಿಯನ್ನು ತ್ಯಜಿಸಿದ್ದಾರೆ.
ಆಕಿಯೊ ಭಾವಿ ಪತಿ ಕೇಯ್ ಮೊರಿಯೊ ಹಡಗಿನಲ್ಲಿ ಕೆಲಸ ಮಾಡುವ ನೌಕರ. ರೆಸ್ಟಾರೆಂಟ್‌ನಲ್ಲಿ ಊಟ ಮಾಡುವಾಗ ಕೇಯ್ ಪ್ರೇಮ ನಿವೇದನೆ ಮಾಡಿದ್ದರು. ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ಬಳಿಕ ಅವರನ್ನೇ ಮದುವೆಯಾಗಲು ಒಪ್ಪಿಕೊಂಡಿದ್ದ ಅಯಾಕೊ ಟೋಕಿಯೋದಲ್ಲಿರುವ ಮೇಜಿ ಜಿಂಗು ಮಂದಿರದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗುತ್ತಿದ್ದಾರೆ. ಜಪಾನ್‌ನಲ್ಲಿ ರಾಜಮನೆತನದವರು ಇತರ ಸಾಮಾಜದವರನ್ನು ಮದುವೆಯಾ ಗುತ್ತಿರುವುದು ಹೆಚ್ಚಾಗಿರುವ ಕಾರಣ ಈಗ ಜಪಾನ್‌ನಲ್ಲಿ ಕೇವಲ 18 ರಾಜ ಮನೆತನಗಳು ಮಾತ್ರ ಉಳಿದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics