ವಿದೇಶ

ಅಮೆರಿಕಾ ಬ್ಯಾಂಕ್ ನಲ್ಲಿ ಗುಂಡಿನ ದಾಳಿ: ಆಂಧ್ರ ಮೂಲದ ಉದ್ಯೋಗಿ ಸೇರಿ 4 ಸಾವು

Raghavendra Adiga
ನ್ಯೂಯಾರ್ಕ್: ಅಮೆರಿಕಾದ ಸಿನ್ಸಿನಾಟಿಯಲ್ಲಿನ ಕಾಸಗಿ ಬ್ಯಾಂಕ್ ಒಂದರಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ್ದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ ಮೂಲದ ಉದ್ಯೋಗಿ  ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾದ ಪ್ರಥ್ವಿರಾಜ್ ಕಂಡೆಪಿ (25) ಸಾವನ್ನಪ್ಪಿರುವ ಭಾರತದ ವ್ಯಕ್ತಿಯಾಗಿದ್ದು  29 ವರ್ಷದ ಒಮರ್ ಎನ್ರಿಕ್ ಸಾಂಟಾ ಪೆರೆಜ್ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಸಿನ್ಸಿನಾಟಿಯಲ್ಲಿರುವ ಫೌಂಟೇನ್ ಸ್ಕ್ವೇರ್ ಬಳಿಯ ಫಿಫ್ತ್ ಥರ್ಡ್ ಬ್ಯಾಂಕ್ ನ ಪ್ರಧಾನ ಕಛೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ಘಟನೆ ಕುರಿತಂತೆ ಮಾಹಿತಿ ಪಡೆದ ಪೋಲೀಸರು ಕಾರ್ಯಾಚರಣೆ ನಡೆಸಿ ದುಷ್ಕರ್ಮಿ ಯುವಕನನ್ನು ಕೊಂದು ಹಾಕಿದ್ದಾರೆ. ಅಲ್ಲದೆ ಆತನ ಬಳಿಯಿದ್ದ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯಲ್ಲಿ ಓರ್ವ ಗನ್ ಮ್ಯಾನ್ ಸೇರಿ  ಇನ್ನೂ ಮೂವರು ಹತ್ಯೆಯಾಗಿದ್ದು ಐದು ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.
ಮೃತ ಭಾರತೀಯ ಯುವಕನ ದೇಹವನ್ನು ತಾಯಿನಾಡಿಗೆ ತರುವ ಸಿದ್ದತೆಗಳು ನಡೆದಿದೆ ಎಂದು ಅಮೆರಿಕಾ ಭಾರತೀಯ ರಾಯಭಾರ ಕಛೇರಿ ಮಾಹಿತಿ ನೀಡಿದೆ.
SCROLL FOR NEXT