ವಿದೇಶ

ಪಾಕ್ ಸರ್ಕಾರದಿಂದ ಸಿಂಧೂ ನಾಗರಿಕರ 'ಅಪಹರಣ': ಪಿಎಂ ಇಮ್ರಾನ್ ಮಾಜಿ ಪತ್ನಿಯಿಂದ ಬಹಿರಂಗ

Vishwanath S
ಇಸ್ಲಾಮಾಬಾದ್: ಸಿಂಧೂ ನಾಗರಿಕರು ಹಾಗೂ ಸಾಮಾಜಿಕ ಕಾರ್ಯಕರ್ತರ ಬಲವಂತದ ಅಪಹರಣಗಳನ್ನು ಪಾಕಿಸ್ತಾನ ಸರ್ಕಾರ ನಡೆಸುತ್ತಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಂ ಖಾನ್ ಬಹಿರಂಗಪಡಿಸಿದ್ದಾರೆ. 
ಬಲೋಚ್ ರಿಪಬ್ಲಿಕನ್ ಪಾರ್ಟಿ ವಕ್ತಾರ ಶೇರ್ ಮೊಹಮ್ಮದ್ ಬುಗ್ತಿ ಟ್ವೀಟರ್ ನಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕಣ್ಮರೆಗಳ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದು ಈ ಬಗ್ಗೆ ಮಾತನಾಡುತ್ತಾ ಖಾನ್, ಸಿಂಧಿ ಸಾಮಾಜಿಕ ಕಾರ್ಯಕರ್ತರು ಮತ್ತು ರಾಷ್ಟ್ರೀಯತಾವಾದಿಗಳ ಅಪಹರಣವು ತೀವ್ರವಾದ ಅನ್ಯಾಯವಾಗಿದ್ದು ಅವರನ್ನು ಸಂವಿಧಾನದ ಪ್ರಕಾರ ಪರಿಗಣಿಸಬೇಕು. ನಾಪತ್ತೆಯಾಗಿರುವ ಜನರ ಕುಟುಂಬಗಳಿಗೆ ಅವರು ಜೀವಂತ ಅಥವಾ ಮೃತಪಟ್ಟಿದ್ದಾರಾ ಎಂಬುದನ್ನು ತಿಳಿಸಬೇಕಿದೆ ಎಂದರು. 
ಕಾಣೆಯಾಗಿರುವ ವ್ಯಕ್ತಿಗಳ ಪಟ್ಟಿಯನ್ನು ತೋರಿಸುತ್ತಾ ರೆಹಂ ಖಾನ್, ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುನ್ಖ್ವಾದಿಂದ ಜನರನ್ನು ಬಲವಂತವಾಗಿ ಅಪಹರಣ ಮಾಡಲಾಗುತ್ತಿತ್ತು. ಇದೀಗ ಇದು ಸಿಂಧ್ ಪ್ರದೇಶಕ್ಕೂ ಹರಡಿದೆ ಎಂದು ಹೇಳಿದರು.
SCROLL FOR NEXT