ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಮಂಘುತ್‌ ಚಂಡಮಾರುತಕ್ಕೆ ತತ್ತರಿಸಿದ ಪಿಲಿಫೈನ್ಸ್: 12 ಸಾವು, ಸಾವಿರಾರು ಜನರ ಬದುಕು ಅತಂತ್ರ

ಭಾರೀ ಚಂಡಮಾರುತ ಮಂಘುತ್‌ ಭೀಕರ ಹೊಡೆತಕ್ಕೆ ಸಿಕ್ಕು ಉತ್ತರ ಫಿಲಿಫೈನ್ಸ್ ನ ಕನಿಷ್ಠ 12 ಜನರು ಸಾವನ್ನಪ್ಪಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.

ಚಂಡಮಾರುತದ ಹೊಡೆತಕ್ಕೆ ನಲುಗಿದ ಫಿಲಿಫೈನ್ಸ್
Raghavendra Adiga
Updated On : 15 Sept 2018, 11:24 am
ಟ್ಯುಗುರಾವ್‌: ಭಾರೀ ಚಂಡಮಾರುತ ಮಂಘುತ್‌ ಭೀಕರ ಹೊಡೆತಕ್ಕೆ ಸಿಕ್ಕು  ಉತ್ತರ ಫಿಲಿಫೈನ್ಸ್ ನ  ಕನಿಷ್ಠ 12 ಜನರು ಸಾವನ್ನಪ್ಪಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಶನಿವಾರ ಮಂಘುತ್‌ ಚಂಡಮಾರುತ ಫಿಲಿಪ್ಪೀನ್ಸ್‌ಗೆ ಅಪ್ಪಳಿಸಿದೆ.ಇದರ ಬೀಕರತೆಗೆ ಹೆದರಿ ಅದೆಷ್ಟೋ ಮಂದಿ ಮನೆಯನ್ನೇ ತೊರೆದು ಹೋಗಿದ್ದಾರೆ.
ಲುಝಾನ್ ದ್ವೀಪಕ್ಕೆ ಚಂಡಮಾರುತ ಅಪ್ಪಳಿಸಿದೆಯಲ್ಲದೆ ಮುಂದಿನ ದಿನಗಳಲ್ಲಿ ಈ ಮಾರುತ ಇನ್ನಷ್ಟು ಭೀಕರ ಸ್ವರೂಪ ತಾಳಲಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Advertisement

ಚಂಡಮಾರುತ  ಮುನ್ಸೂಚನೆ ಮೊದಲೇ ತಿಳಿದಿದ್ದ ಫಿಲಿಫೈನ್ಸ್ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ್ತ್ತು. ಪರಿಹಾರ ಕಾರ್ಯಾಚರಣೆಗಾಗಿ ಹೆಚ್ಚುವರಿ ರಕ್ಷಣಾ ಸಿಬ್ಬಂದಿ ನೇಮಕವಾಗಿತ್ತು.
ಇನ್ನು ಹಾಂಗ್ ಕಾಂಗ್, ದಕ್ಷಿಣ ಚೀನಾ ಭಾಗಗಳಲ್ಲಿ ಸಹ ಚಂಡಮಾರುತ ಪ್ರಭಾವ ಬೀರಿದೆ.ಇಲ್ಲಿ ಸಹ ಸಾಕಷ್ಟು ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಮಂಘುತ್ ಚಂಡಮಾರುತ ಗಂಟೆಗೆ 160 ಕಿ.ಮೀ. ವೇಗದಲ್ಲಿ ಬೀಸುತ್ತಿದೆ ಎಂದು ಮಾದ್ಯಮ ವರದಿಯಲ್ಲಿ ಹೇಳಲಾಗಿದೆ..

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments