ಸ್ಟಾರ್ಮಿ ಡೇನಿಯಲ್ಸ್-ಡೊನಾಲ್ಡ್ ಟ್ರಂಪ್ 
ವಿದೇಶ

ಡೊನಾಲ್ಡ್ ಟ್ರಂಪ್ 'ಅಸಾಮಾನ್ಯ ಶಿಶ್ನ' ಹೊಂದಿದ್ದಾರೆ: ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್

ಅಮೆರಿಕ ಅಧ್ಯಕ್ಷರ ಅಫೇರ್ ವಿಷಯ ಹಲವು ಬಾರಿ ಸುದ್ದಿಯಲ್ಲಿತ್ತು. ಈಗ ಡೊನಾಲ್ಡ್ ಟ್ರಂಪ್ ನನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಆರೋಪ ಮಾಡಿರುವ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಹೊಸ

ಅಮೆರಿಕ ಅಧ್ಯಕ್ಷರ ಅಫೇರ್ ವಿಷಯ ಹಲವು ಬಾರಿ ಸುದ್ದಿಯಲ್ಲಿತ್ತು. ಈಗ ಡೊನಾಲ್ಡ್ ಟ್ರಂಪ್ ನನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಆರೋಪ ಮಾಡಿರುವ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. 
ಫುಲ್ ಡಿಸ್ಕ್ಲೋಷರ್ ಎಂಬ ಪುಸ್ತಕದಲ್ಲಿ ಡೊನಾಲ್ಡ್ ಟ್ರಂಪ್ ಬಗ್ಗೆ ಬರೆದಿರುವ ಸ್ಟಾರ್ಮಿ ಡೇನಿಯಲ್ಸ್, " ಡೊನಾಲ್ಡ್ ಟ್ರಂಪ್ ಅಸಮಾನ್ಯ ಶಿಷ್ನ ಹೊಂದಿದ್ದಾರೆ ಎಂದು ಹೇಳಿದ್ದಾರೆ. ದಿ ಗಾರ್ಡಿಯನ್ ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, 2006 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸೆಲಬ್ರಿಟಿ  ಗಾಲ್ಫ್  ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹಾಸಿಗೆ ಹಂಚಿಕೊಂಡಿದ್ದಾಗಿ ಹೇಳಿರುವ ಸ್ಟಾರ್ಮಿ ಡೇನಿಯಲ್ಸ್, ಡೊನಾಲ್ಡ್ ಟ್ರಂಪ್ ಅಸಮಾನ್ಯ ಮರ್ಮಾಂಗ ಹೊಂದಿದ್ದಾರೆ ಎಂದು ಹೇಳಿದ್ದಾರೆ. 
ಡೊನಾಲ್ಡ್ ಟ್ರಂಪ್ ಅವರೊಂದಿಗೆ ಲೈಂಗಿಕ ಕ್ರಿಯೆ ಅತ್ಯಂತ ಕನಿಷ್ಠ ಸಂತಸ ನೀಡಿತ್ತು ಎಂದು ಹೇಳಿರುವ  ಸ್ಟಾರ್ಮಿ ಡೇನಿಯಲ್ಸ್, ಡೊನಾಲ್ಡ್ ಟ್ರಂಪ್ ಅವರ ಮರ್ಮಾಂಗ ಮಾರಿಯೋ ಕಾರ್ಟ್ ನಲ್ಲಿ ಬರುವ ಮಶ್ರೂಮ್ ಪಾತ್ರದ ರೀತಿಯಲ್ಲಿತ್ತು ಎಂದು ಪುಸ್ತಕದಲ್ಲಿ ಬರೆದಿರುವುದನ್ನು ದಿ ಗಾರ್ಡಿಯನ್ ವರದಿ ಮಾಡಿದೆ. 
ಆದರೆ ನೀಲಿ ಚಿತ್ರತಾರೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಡೊನಾಲ್ಡ್ ಟ್ರಂಪ್ ಹಲವು ಬಾರಿ ಅಲ್ಲಗಳೆದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸ್ಟಾರ್ಮಿ ಡೇನಿಯಲ್ಸ್ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಆರೋಪಗಳನ್ನು ಮಾಡದಂತೆ 130,000 ಅಮೆರಿಕನ್ ಡಾಲರ್ ನಷ್ಟು ಆಮಿಷವೊಡ್ಡಲಾಗಿತ್ತು ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ವಲಸೆ ಕಾರ್ಮಿಕ ಸಾವು, ಮತ್ತೊಬ್ಬರಿಗೆ ಗಾಯ

ಇರಾನ್ ವಿದೇಶಾಂಗ ಸಚಿವ- ಎಸ್ ಜೈಶಂಕರ್ ಮಾತುಕತೆ: ಪ್ರಾದೇಶಿಕ ಸಮರದ ಬಗ್ಗೆ ಆತಂಕ, ಹಡಗುಗಳ ಮೇಲೆ ದಾಳಿ ನಡೆಸದಂತೆ ಒತ್ತಾಯ

ಆಗಸ್ಟ್ 1 ರಂದು ಪ್ರಧಾನ ಮಂತ್ರಿ ಮೋದಿ ಆಂಧ್ರಪ್ರದೇಶ ಮೈಸೂರಿಗೆ ಭೇಟಿ; ಅಭಿವೃದ್ಧಿ ಯೋಜನೆಗಳ ಉದ್ಘಾಟನೆ

ಕಾವೇರಿ ಕಿತ್ತಾಟದ ನಡುವೆ ರಾಜ್ಯಕ್ಕೆ ಹವಾಮಾನ ಇಲಾಖೆ ಸಿಹಿ ಸುದ್ದಿ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಸಾಧ್ಯತೆ!

'ಕರ್ನಾಟಕಕ್ಕೆ ನೀರು ನೀಡಲು ನಮ್ಮ ವಿರೋಧವಿಲ್ಲ.. ಆದ್ರೆ ಮೇಕೆದಾಟು ಬೇಡ": ಕಾವೇರಿ ವಿವಾದ ಕುರಿತು AIADMK ಸಂಸದ ಎಂ. ತಂಬಿದುರೈ