ವಿದೇಶ

ವಿವಿಐಪಿ ಚಾಪರ್ ಹಗರಣ: ಕ್ರಿಶ್ಚಿಯನ್‌ ಮೈಕಲ್‌ ಗಡೀಪಾರಿಗೆ ದುಬೈ ನ್ಯಾಯಾಲಯ ಆದೇಶಿಸಿಲ್ಲ!

Raghavendra Adiga
ದುಬೈ: ಬಹುಕೋಟಿ ವಿವಿಐಪಿ ಚಾಪರ್ ಹಗರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ಬ್ರಿಟನ್ ಮೂಲದ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕಲ್‌ ಗಡಿಪಾರಿಗೆ ದುಬೈನ ಯಾವ ನ್ಯಾಯಾಲಯವೂ ಆದೇಶ ನೀಡಿಲ್ಲ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಯುಎಇ ಸರ್ಕಾರವು ಓರ್ವ ಬ್ರಿಟೀಷ್ ನಾಗರಿಕನನ್ನು ಮೂರನೇ ರಾಷ್ಟ್ರವೊಂದಕ್ಕೆ ಗಡೀಪಾರು ಮಾಡಬಹುದೆ ಎಂದು ದುಬೈ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಇದಕ್ಕೆ ನ್ಯಾಯಾಲಯವು ತನ್ನ ಅಭಿಪ್ರಾಯವನ್ನಷ್ಟೇ ವ್ಯಕ್ತಪಡಿಸಿತ್ತು ಹೊರತು ಆದೇಶ ನಿಡಿರಲಿಲ್ಲ ಎನ್ನಲಾಗಿದೆ.
ಮಾದ್ಯಮಗಳ ವರದಿಯಂತೆ ಭಾರತಕ್ಕೆ ಮೈಕಲ್‌ ಹಸ್ತಾಂತರ ಕುರಿತು ಯಾವ ನ್ಯಾಯಾಲಯವೂ ಆದೇಶ ನೀಡಿಲ್ಲ  ಎಂದು ತಿಳಿದು ಬಂದಿದೆ.
ಈ ವಿಷಯಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಖಚಿತಪಡಿಸಿಕೊಳ್ಳಲು ಭಾರತೀಯ  ವಿದೇಶಾಂಗ ವ್ಯವಹಾರಗಳ ಸಚಿವಾಲಯ ಯುಎಇಯಲ್ಲಿನ ತನ್ನ ದೂತಾವಾಸಕ್ಕೆ ನಿರ್ದೇಶನ ನೀಡಿದೆ.
ಮೈಕಲ್‌ ವಶಕ್ಕೆ ಸಂಬಂಧಿಸಿ ಯುಎಇಯ ಅಧಿಕಾರಿಗಳಿಂದ ಭಾರತ ಯಾವುದೇ ಅಧಿಕೃತ ಸಂವಹನವನ್ನು ಸ್ವೀಕರಿಸಲಿಲ್ಲ ಎಂದು ಸರ್ಕಾರದ ಮೂಲಗಳು ಹೇಳಿದೆ.
3,600 ಕೋಟಿ ರೂ. ಮೌಲ್ಯದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಚಾಪರ್ ಹಗರಣಕ್ಕೆ ಸಂಬಂಧಿಸಿದಂತೆ ಕ್ರಿಶ್ಚಿಯನ್‌ ಮೈಕಲ್‌ ಭಾರತಕ್ಕೆ ಬೇಕಾದ ವ್ಯಕ್ತಿಯಾಗಿದ್ದಾನೆ.
SCROLL FOR NEXT