ವಿದೇಶ

ಟ್ರಂಪ್ ಜಾಸ್ತಿ ಎಗರಾಡಬೇಡಿ, ಸದ್ದಾಂ ಹುಸೇನ್‌ಗೆ ಆದ ಗತಿ ನಿಮಗೂ ಆಗಬಹುದು: ಇರಾನ್ ಅಧ್ಯಕ್ಷ ರೋಹಾನಿ

Vishwanath S
ದುಬೈ: ತೈಲ ಖರೀದಿ ಮತ್ತು ವ್ಯಾಪಾರದ ಮೇಲೆ ಅನವಶ್ಯಕವಾಗಿ ನಿರ್ಬಂಧ ಹೇರುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇರಾನ್ ಅಧ್ಯಕ್ಷ ಹಸನ್ ರೋಹಾನಿ ಗುಡುಗಿದ್ದಾರೆ.
ಅಮೆರಿಕ ಇರಾನ್ ಮೇಲೆ ತೈಲ ಮತ್ತು ಅಣ್ವಸ್ತ್ರ ನಿರ್ಬಂಧ ಹೇರಿಕೆ ಮಾಡುತ್ತಿದ್ದು ಇದರಿಂದಾಗಿ ಉಭಯ ರಾಷ್ಟ್ರಗಳ ಮಧ್ಯೆ ಕಲಹಕ್ಕೆ ಕಾರಣವಾಗಿದೆ. ಆದರೆ ಅಮೆರಿಕದ ಬೆದರಿಕೆಗಲ್ಲ ನಾವು ಬಗ್ಗುವುದಿಲ್ಲ ಎಂದು ರೋಹಾನಿ ಹೇಳಿದ್ದಾರೆ. 
ಇನ್ನು ಇರಾನ್ ವಿಷಯದಲ್ಲಿ ಡೋನಾಲ್ಡ್ ಟ್ರಂಪ್ ಅನವಶ್ಯಕವಾಗಿ ಮೂಗು ತೂರಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಇರಾಕ್ ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ಗೆ ಆದ ಗತಿಯೇ ನಿಮಗೂ ಆಗಲಿದೆ ಎಂದು ರೋಹಾನಿ ಹರಿಹಾಯ್ದಿದ್ದಾರೆ. 
ನಮ್ಮ ಬಳಿ ಇರುವ ಅಣ್ವಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಪ್ರದರ್ಶನಕ್ಕೆ ಇಟ್ಟಿಲ್ಲ. ಅವಶ್ಯಕತೆ ಬಿದ್ದರೆ ಅವುಗಳನ್ನು ಉಡಾಯಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
SCROLL FOR NEXT