ಲಾಹೊರ್ : ಭಾರತಕ್ಕೆ ಪಾಕಿಸ್ತಾನದಿಂದ ಸ್ನೇಹದ ಆಪರ್ ನ್ನು ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ಹೇಳಿರುವ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ , ಶಾಂತಿ ಮಾತುಕತೆಗಳನ್ನು ನಡೆಸಲು ಭಾರತದ ನಾಯಕರು "ಸೊಕ್ಕನ್ನು" ಬಿಡಬೇಕು ಎಂದಿದ್ದಾರೆ.
ಭಯೋತ್ಪಾದನೆ ಹಾಗೂ ಕಾಶ್ಮೀರ ಸಮಸ್ಯೆ ಸೇರಿದಂತೆ ಪ್ರಮುಖ ವಿವಾದಗಳ ಬಗ್ಗೆ ಮಾತುಕತೆ ನಡೆಸಲು ಬಯಸುವುದಾಗಿ ಇಮ್ರಾನ್ ಖಾನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು.
ಆದಾಗ್ಯೂ, ಜಮ್ಮು-ಕಾಶ್ಮೀರದಲ್ಲಿ ಮೂವರು ಪೊಲೀಸರ ಬರ್ಬರ ಹತ್ಯೆ ಹಾಗೂ ಕಾಶ್ಮೀರ ಉಗ್ರ ಬರ್ಹನ್ ವಾನಿಯನ್ನು ವೈಭವೀಕರಿಸುವ" ಅಂಚೆ ಅಂಚೆಚೀಟಿಗಳ ಬಿಡುಗಡೆ ಕಾರಣದಿಂದಾಗಿ ಈ ಸಭೆಯನ್ನು ಹಿಂತೆಗೆದುಕೊಂಡಿರುವುದಾಗಿ ಭಾರತ ಶುಕ್ರವಾರ ಹೇಳಿತ್ತು.