ವಿದೇಶ

ಭಯೋತ್ಪಾದಕ ಬೆದರಿಕೆ ವರದಿಯಲ್ಲಿ ಸಿಖ್ಖ್ ಉಗ್ರವಾದದ ಉಲ್ಲೇಖವನ್ನು ಕೈಬಿಟ್ಟ ಕೆನಡಾ

Raghavendra Adiga
ಟೊರಾಂತೋ: ಕೆನಡಾದಲ್ಲಿನ ಸಿಖ್ಖ್ ವಲಸೆಗಾರರ ಒತ್ತಡಕ್ಕೆ ಮಣಿದು ಭಯೋತ್ಪಾದನಾ ಬೆದರಿಕೆಗಳ ಕುರಿಇತಂತೆ ತಾನು ತಯಾರಿಸಿದ್ದ 2018ರ ವರದಿಯಿಂದ ಸಿಖ್ಖ್ ಹಾಗೂ ಖಲಿಸ್ತಾನಿ ಉಗ್ರವಾದದ ಪ್ರಸ್ತಾವನೆಗಳನ್ನು ಕೆನಡಾ ಸರ್ಕಾರ ತೆಗೆದು ಹಾಕಿದೆ.
2018 ರ ಕೆನಡಾದ ಭಯೋತ್ಪಾದನಾ ಹಾನಿಯ ಕುರಿತಾದ ಸಾರ್ವಜನಿಕ ವರದಿ'ಯಿಂದ ಸಿಖ್ಖ್ ಉಗ್ರವಾದಿತ್ವ ಹಾಗೂ ಖಲಿಸ್ತಾನ ಉಗ್ರರ ಉಲ್ಲೇಖವನ್ನು ಕೆನಡಾ ಕೈಬಿಟ್ಟಿದೆ.ಈ ಉಲ್ಲೇಖವು ವಿಶ್ವದಾದ್ಯಂತ ಸಿಖ್ಖರನ್ನು ಕೆರಳಿಸಿತು.ಕೆನಡಾದ ಸಿಖ್ಖರು ಉಲ್ಲೇಖವನ್ನು ತೆಗೆದುಹಾಕಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೆನಡಾದಲ್ಲಿ ಸಿಖ್ಖ ಸಮುದಾಯದ ಗುರುದ್ವಾರಗಳು, ಸಿಖ್ಖ್ ವಕೀಲರ ಗುಂಪು ಸೇರಿ ಹಲವರು ಹಲವು ಸಭೆಗಳನ್ನು ಕರೆದು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಸೂಚಿಸಿದ್ದರು.
ಈಗ ದೇಶದ ಪ್ರಭಾವಿ ಸಿಖ್ಖ್ ಸಮುದಾಯದ ಒತ್ತಡಕ್ಕೆ ಮಣಿದ ಸರ್ಕಾರ ಸಿಖ್ಖ್  ಉಗ್ರಗಾಮಿತ್ವ ಮತ್ತು ಖಲೀಸ್ಥಾನ್ ಪದಗಳನ್ನು ಅಳಿಸಿ ಹಾಕಿದ್ದು ಆ ಜಾಗದಲ್ಲಿ  'ಭಾರತದೊಳಗೆ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ಹಿಂಸಾಚಾರವನ್ನು ಬೆಂಬಲಿಸುವ ಉಗ್ರರು' ಎಂದು ಸೇರಿಸಿದೆ. ಎಪ್ರಿಲ್ 12 ರಂದು ನವೀಕರಿಸಲಾದ ವರದಿಯು ಬಿಡುಗಡೆಯಾಗಿದೆ.
ಚುನಾವಣಾ ವರ್ಷದಲ್ಲಿ ದೇಶದ ಪ್ರಭಾವಿ ಸಮುದಾಯ ಸಿಖ್ಕರ ವಿರೋಧಕ್ಕೆ ಸಿಕ್ಕಿಕೊಳ್ಲಲು ಬಯಸದ ಕೆನಡಾ ಸರ್ಕಾರ ದೇಶದ ಆಂತರಿಕ ರಾಜಕೀಯ ಅನಿವಾರ್ಯತೆ , ವಿಶೇಷವಾಗಿ ಭಾರತೀಯ ಹಾಗೂ ಸಿಖ್ಖ್ ಸಮುದಾಯದ ಓಲೈಕೆಗಾಗಿ ಈ ಬದಲಾವಣೆ ಮಾಡಿದೆ ಎಂದು ಈ ಬೆಳವಣಿಗೆಗಳನ್ನು ಹತ್ತಿರದಿಂದ ಕಂಡಿರುವ ರಾಜಕೀಯ ವಿಶ್ಲೇಷಕರು ಹೇಲಿದ್ದಾರೆ.
ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡಿಯೊ ವಾನ್ಸೂವರ್ನಲ್ಲಿ ಖಲ್ಸಾ ದಿವಾನ್ ಸೊಸೈಟಿಯಿಂದ ಆಯೋಜಿಸಲ್ಪಟ್ಟಿರುವ ವೈಸಾಕಿ ಪರೇಡ್ನಲ್ಲಿ ರಾಷ್ಟ್ರೀಯ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ಅವರೊಂದಿಗೆ ಭೇಟಿಯಾಗುವ 24 ಗಂಟೆಗಳ ಮುಂಚಿತವಾಗಿ ನವೀಕರಿಸಿದ ಆವೃತ್ತಿ ಬಿಡುಗಡೆಯಾಗಿದೆ.
SCROLL FOR NEXT