ವಿದೇಶ

ತಾಯಿ ಕರಳು ಚಿರಋಣಿ: 21 ದಿನದ ನವಜಾತ ಶಿಶುವಿನ ಜೀವ ಉಳಿಸಿದ ಪೊಲೀಸರು, ವಿಡಿಯೋ ವೈರಲ್!

Vishwanath S
ಜನ ರಕ್ಷಕರಾಗಿರುವ ಪೊಲೀಸರು ತಾಯಿಯ ಎದೆಹಾಲು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರಾಡಲು ಕಷ್ಟಪಡುತ್ತಿದ್ದ  21 ದಿನದ ನಜಜಾತ ಶಿಶುವಿನ ಜೀವವನ್ನು ಉಳಿಸುವ ಮೂಲಕ ಇದೀಗ ಹೀರೋ ಆಗಿದ್ದಾರೆ. ಇನ್ನು ಮಗುವಿನ ಜೀವ ಉಳಿಸಲು ಪೊಲೀಸರು ನಡೆಸಿದ ಪ್ರಯತ್ನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ರೆಜಿಲ್ ನ ಸಾವ್ ಪಾಲೊ ಮರಿಲಿಯಾ ಸಮೀಪದ ಪೊಲೀಸ್ ಠಾಣೆಗೆ ದಂಪತಿಗಳು ನವಜಾತ ಶಿಶುವನ್ನು ತೆಗೆದುಕೊಂಡು ಬರುತ್ತಾರೆ. ಮಗುವನ್ನು ಕಂಡ ಪೊಲೀಸರಿಬ್ಬರು ಕೂಡಲೇ ಮಗುವಿನ ಬಾಯಿಗೆ ಬಾಯಿಟ್ಟು ಜೋರಾಗಿ ಉಸಿರು ಬಿಡುವ ಮೂಲಕ ಮಗುವನ್ನು ರಕ್ಷಿಸಿದ್ದಾರೆ. 
ಪೊಲೀಸರು ಮಗುವನ್ನು ರಕ್ಷಿಸುತ್ತಿರುವಾಗ ಅಲ್ಲೇ ಇದ್ದ ತಾಯಿ ಆತಂಕದಲ್ಲಿ ಓಡಾಡುತ್ತಿರುವ ದೃಶ್ಯಗಳು ಎಂತಹವರ ಕರುಳು ಚುರುಕ್ ಅನ್ನುವಂತೆ ಮಾಡಿತು. ಇನ್ನು ಮಗು ಉಸಿರಾಡಿದ್ದನ್ನು ಗಮನಿಸಿದ ಕೂಡಲೇ ತಾಯಿ ಹೋದ ಜೀವ ಬಂದಿತು ಎಂಬಂತೆ ಸಂತೋಷಿಸಿದರು.
ಈ ವಿಡಿಯೋ ನೋಡಿದ ಟ್ವೀಟರಿಗರು ಪೊಲೀಸರಿಗೆ ಶಹಬಾಶ್ ಹೇಳಿದ್ದು ನೀವೇ ನಿಜವಾದ ಹೀರೋಗಳು ಎಂದು ಶ್ಲಾಘಿಸಿದ್ದಾರೆ.
SCROLL FOR NEXT