ವಿದೇಶ

ಪಾಕಿಸ್ತಾನ ವಶದಲ್ಲಿದ್ದ 55 ಭಾರತೀಯ ಮೀನುಗಾರರ ಬಿಡುಗಡೆ

Srinivas Rao BV
ಇಸ್ಲಾಮಾಬಾದ್: ಪಾಕಿಸ್ತಾನ ದೇಶವು ಸದ್ಭಾವನಾ ಸಂದೇಶ ಸಾರುವ ಮೂಲಕ ಪಾಕಿಸ್ತಾನ ಜೈಲಿನಲ್ಲಿದ್ದ 55 ಭಾರತೀಯ ಮೀನುಗಾರರು ಹಾಗೂ ಅನ್ಯ ಐವರು ನಾಗರಿಕರನ್ನು ಬಿಡುಗಡೆಗೊಳಿಸಿದೆ.
ಪಾಕ್ ಮುಕ್ತಗೊಳಿಸಿದ ಮೀನುಗಾರರು ಹಾಗೂ ಅನ್ಯ ಐವರು ಭಾರತೀಯ ನಾಗರಿಕರು ಕರಾಚಿಯ ಮಿಲರ್ ಜೈಲಿನಲ್ಲಿ ಬಂಧಿಯಾಗಿದ್ದರು ಎಂದು ಅಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಈದಿ ಫೌಂಡೇಷನ್ ಅಧ್ಯಕ್ಷ ಫೈಜಲ್ ಈದಿ ಹಾಗೂ ಸಾಧ್ ಈದಿ ಅವರ ಸಲಹೆಯ ಮೇರೆಗೆ ಭಾರತೀಯ ಮೀನುಗಾರರನ್ನು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಕರೆ ತಂದು, ನಂತರ ಬಸ್ಸಿನಲ್ಲಿ ಲಾಹೋರ್ ಕ್ಕೆ ಕಳುಹಿಸಲಾಯಿತು.
ಬಿಡುಗಡೆಗೊಂಡವರಿಗೆ ಈದಿ ಫೌಂಡೇಷನ್ ಐದು ಸಾವಿರ ರೂ. ನೀಡಿ ಸತ್ಕರಿಸಲಾಗಿದ್ದು, ವಿಶೇಷ ಬಸ್ ಮೂಲಕ ಅವರನ್ನು ವಾಘಾ ಗಡಿಗೆ ಕಳುಹಿಸಿಕೊಡಲಿದ್ದಾರೆ.
ಎರಡು ದೇಶಗಳ ಮಧ್ಯೆ ಸದ್ಭಾವನಾ ಸಂದೇಶ ಸಾರುವುದಕ್ಕಾಗಿ ಪಾಕಿಸ್ತಾನ, ಭಾರತೀಯ 360 ಕೈದಿಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. ಇದರಲ್ಲಿ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಂಡ 355 ಮೀನುಗಾರರು ಹಾಗೂ ಐವರು ಭಾರತೀಯ ನಾಗರಿಕರು ಕೂಡ ಒಳಗೊಂಡಿದ್ದಾರೆ.
ಜನವರಿ ತಿಂಗಳಲ್ಲಿಯೇ ಎರಡು ದೇಶಗಳು ಕೈದಿಗಳ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದವು. ಅದರನ್ವಯ ಭಾರತೀಯ ಜೈಲಿನಲ್ಲಿದ 347 ಪಾಕಿಸ್ತಾನಿ ಕೈದಿಗಳು ಬಂಧಿಯಾಗಿದ್ದು, ಅದರಲ್ಲಿ 249 ನಾಗರಿಕರು ಹಾಗೂ 98 ಮೀನುಗಾರರಿದ್ದಾರೆ.
SCROLL FOR NEXT