ವಿದೇಶ

ಸರಣಿ ಸ್ಪೋಟ: ಜನರ ಜೀವ ರಕ್ಷಣೆಗಾಗಿ ಬುರ್ಖಾ ನಿಷೇಧಿಸಿದ ಶ್ರೀಲಂಕಾ

Raghavendra Adiga
ಕೊಲಂಬೋ: ಈಸ್ಟರ್ ಸಂಡೇ ದಿನದ ಎಂಟು ಸರಣಿ ಬಾಂಬ್ ಸ್ಪೊಟದ ನಂತರ ಶ್ರೀಲಂಕಾ ಸರ್ಕಾರ ಭಯೋತ್ಪಾದಕರ ನಿಗ್ರಹಕ್ಕಾಗಿ ಣಾನಾ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ಶ್ರೀಲಂಖಾ ಸರ್ಕಾರ ಬುರ್ಖಾ ತೊಡುವುದನ್ನು ನಿಷೇಧಿಸಿದೆ. ಬುರ್ಖಾ ಸೇರಿದಂತೆ ಯಾವುದೇ ಬಗೆಯ ಮುಖಗವಸುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೊಡುವುದಕ್ಕೆ ಶ್ರೀಲಂಕಾ ಸರ್ಕಾರ ಸಂಪೂರ್ಣ ನಿಷೇಧ ಹೇರಿದೆ.
ಭಾನುವಾರ ತಡರಾತ್ರಿ ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಬಿದ್ದಿದ್ದು  "ವ್ಯಕ್ತಿಯ ಗುರುತಿಸುವಿಕೆಯನ್ನು ತಡೆಗಟ್ಟುವ ಯಾವುದೇ ಮುಖದಗವಸುಗಳನ್ನು ಧರಿಸುವುದು ತುರ್ತು ಪರಿಸ್ಥಿತಿಯ ನಿಬಂಧನೆಗಳ ಅಡಿಯಲ್ಲಿ ನಿಷೇಧಿಸಲಾಗಿದೆ. ಬುರ್ಖಾದಂತಹಾ ಮುಖಗವಸುಗಳನ್ನು ತೊಡುವುದರಿಂದ ಭದ್ರತೆಗೆ ಆತಂಕವಿದೆ. ಅಲ್ಲದೆ ನ್ಬುರ್ಖಾ ಧಾರಣೆ ಮೂಲಭೂತವಾದದ ಸಂಕೇತವಾಗಿದೆ"  ಎಂದು ವಿವರಿಸಿದೆ.
"ತುರ್ತು ಕ್ರಮದ ಅಡಿಯಲ್ಲಿ ಸುಲಭವಾಗಿ ವ್ಯಕ್ತಿಯನ್ನು ಗುರುತಿಸಲು ಅಡ್ಡಿಯಾಗುವ ವ ಎಲ್ಲ ರೀತಿಯ ಮುಖಗವಸುಗಳನ್ನು  ನಿಷೇಧಿಸುವಂತೆ ಅಧ್ಯಕ್ಷರು ನಿರ್ಧಾರ ತೆಗೆದುಕೊಂಡಿದ್ದಾರೆ."
ಶ್ರೀಲಂಕಾದ ಸಂಸತ್ ಸದಸ್ಯರು ಖಾಸಗಿ ಪ್ರಸ್ತಾವನೆಯೊಂದನ್ನು ಸಲ್ಲಿಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ.
ವಾಸ್ತವವಾಗಿ, ಆಲ್ ಸೆಟ್ಲಾನ್ ಜಮಿಯುತುಲ್ ಉಲೇಮಾಎಂಬ ಹೆಸರಿನ ಮುಸ್ಲಿಂ ಧರ್ಮದರ್ಶಿಗಳ ಸಂಘಟನೆಯೂ ಭದ್ರತಾ ಪಡೆಗಳಿಗೆ ಸಹಾಯಕ್ಕಾಗಿ ಬುರ್ಖಾ. ನಿಕಾಬ್ಧಾರಣೆಯನ್ನು ಬಿಡಲು ಮಹಿಳೆಯರನ್ನು ಕೇಳಿದೆ
ಏಪ್ರಿಲ್ 21 ರಂದು ದ್ವೀಪರಾಷ್ಟ್ರದ ಎಂಟು ಕಡೆಗಳಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಕೆಲ ಭಾರತೀಯರೂ ಸೇರಿದಂತೆ  250 ಕ್ಕೂ  ಹೆಚ್ಚು ಜನ ಪ್ರಾಣ ಬಿಟ್ಟಿದ್ದರು. ಕನಿಷ್ಠ 500 ಜನ ಗಾಯಗೊಂಡಿದ್ದರು. ಆ ಬಳಿಕ ಶ್ರೀಲಂಕಾದಲ್ಲಿ  ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.
SCROLL FOR NEXT