ವಿದೇಶ

ಐಸಿಜೆ ತೀರ್ಪು ಹಿನ್ನೆಲೆ: ಕುಲಭೂಷಣ್ ಜಾಧವ್ ಗೆ ರಾಜತಾಂತ್ರಿಕ ನೆರವಿಗೆ ಪಾಕ್ ಅನುಮತಿ

Raghavendra Adiga
ಪಾಕಿಸ್ತಾನದಲ್ಲಿ ಬಂಧಿತನಾಗಿರುವ ಭಾರತೀಯ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ನಾಳೆ ಭೇಟಿಯಾಗಲು ಭಾರತದ ದೂತಾವಾಸದವರಿಗೆ ಪಾಕ್ ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ಜಾಧವ್ ಗೆ ಅಗತ್ಯ ರಾಜತಾಂತ್ರಿಕ ನೆರವು ನಿಡಲು ಪಾಕ್ ಸಮ್ಮತಿಸಿದೆ.
ಅಂತರಾಷ್ಟ್ರೀಯ ನ್ಯಾಯಾಲಯದ  ನ್ಯಾಯಾಧೀಶ ಅಬ್ದುಲ್ಕಾವಿ ಅಹ್ಮದ್ ಯೂಸುಫ್ ನೇತೃತ್ವದ 16 ಸದಸ್ಯರ ನ್ಯಾಯಪೀಠವು  ಜುಲೈ 19 ರಂದು ಪಾಕಿಸ್ತಾನಕ್ಕೆ ಜಾಧವ್ ಅವರ ಗಲ್ಲುಶಿಕ್ಷೆ ಮತ್ತು ಶಿಕ್ಷೆಯ "ಪರಿಣಾಮಕಾರಿ ಪರಿಶೀಲನೆ ಮತ್ತು ಮರುಪರಿಶೀಲನೆ" ಯನ್ನು ಕೈಗೊಳ್ಳಲು ಆದೇಶಿಸಿತ್ತು. ಅಲ್ಲದೆ ಭಾರತ ದೂತಾವಾಸ ಸಂವಹನಕ್ಕೂ ಸಹ ಒಪ್ಪಿಗೆ ಸೂಚಿಸಿತ್ತು.
ತನ್ನ 42 ಪುಟಗಳ ಆದೇಶದಲ್ಲಿ, ವಿಶ್ವ ನ್ಯಾಯಾಲಯವು ಈ ಪ್ರಕರಣದಲ್ಲಿ ಭಾರತೀಯ ಅರ್ಜಿಯನ್ನು ಒಪ್ಪಿಕೊಂಡಿದ್ದು , ಜಾಧವ್ ಅವರ ಶಿಕ್ಷೆಯ "ಪರಿಣಾಮಕಾರಿ ಪರಿಶೀಲನೆ" ನಡೆಸಬೇಕೆಂದಿದ್ದಲ್ಲದೆ ಜಾಧವ್ ಗೆ ಪಾಕಿಸ್ತಾನ ವಿಧಿಸಿದ್ದ ಮರಣದಂಡನೆ ಶಿಕ್ಷೆಗೆ ತಡೆ ನೀಡಿತ್ತು. ಆದಾಗ್ಯೂ, ಜಾಧವ್‌ಗೆ ಶಿಕ್ಷೆ ವಿಧಿಸುವ ಮಿಲಿಟರಿ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸುವುದು, ಆತನ ಬಿಡುಗಡೆ ಮತ್ತು ಭಾರತಕ್ಕೆ ಸುರಕ್ಷಿತವಾಗಿ ಸಾಗುವುದು ಸೇರಿದಂತೆ ಭಾರತವು ಕೋರಿದ ಕೆಲವು ಪರಿಹಾರಗಳನ್ನು ನ್ಯಾಯಪೀಠ ತಿರಸ್ಕರಿಸಿತು
ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿಯಾಗಿದ್ದ 49 ವರ್ಷದ ಜಾಧವ್ ಅವರಿಗೆ 2017 ರ ಏಪ್ರಿಲ್‌ನಲ್ಲಿಢಚರ್ಯೆ ಮತ್ತು ಭಯೋತ್ಪಾದನೆ" ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು
SCROLL FOR NEXT