ವಿದೇಶ

370ನೇ ವಿಧಿ ರದ್ದತಿ: ಮತ್ತೊಂದು ಪುಲ್ವಾಮಾ ದಾಳಿಯ ಬೆದರಿಕೆ ಹಾಕಿದ ಇಮ್ರಾನ್ ಖಾನ್!

Raghavendra Adiga
ಇಸ್ಲಾಮಾಬಾದ್: ಭಾರತವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ಕಾರಣ ಪುಲ್ವಾಮಾ ದಾಳಿಯಂತಹ ದಾಳಿಗಳು ಮತ್ತೆ ಮರುಕಳಿಸಬಹುದು ಎಂದು ಪಾಕಿಸ್ತಾನ ಪ್ರಧಾನಿ ನಿ ಇಮ್ರಾನ್ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದ ನಿರ್ಧಾರದ ನಂತರ ಪುಲ್ವಾಮಾ ದಂತಹಾ ದಾಳಿಗಳು ಮರುಕಳಿಸುವ ಸಾಧ್ಯತೆ ಇದೆ,  ಇದು ಪಾಕಿಸ್ತಾನ ಮತ್ತು ಭಾರತದ ನಡುವೆ ಸಾಂಪ್ರದಾಯಿಕ ಯುದ್ಧಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ. "ಇದು ಯಾರೂ ಗೆಲ್ಲದ ಯುದ್ಧ ಮತ್ತು ಪರಿಣಾಮಗಳು ಜಾಗತಿಕ ಮಟ್ಟದಲ್ಲಿ ಆಗುತ್ತದೆ.  ಕಾಶ್ಮೀರ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಕರೆಯಲ್ಪಟ್ಟ ಅಪರೂಪದ ಸಂಸತ್ತಿನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ಭಾರತ ಸರ್ಕಾರ ವಿಶೇಷವಾದ 370 ನೇ ವಿಧಿಯನ್ನು ರದ್ದುಪಡಿಸಿದ ದಿನದ ತರುವಾಯ ಪಾಕ್ ಪ್ರಧಾನಿ ಈ ಪ್ರತಿಕ್ರಿಯೆ ನಿಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರವು ತನ್ನ ಅವಿಭಾಜ್ಯ ಅಂಗವಾಗಿದೆ ಮತ್ತು ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಒಳಗೊಂಡಿದೆ ಎಂದು ಭಾರತ ಹೇಳುತ್ತದೆ.ಸಧ್ಯ ಎರಡೂ ಪರಮಾಣು ಶಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳಾಗಿದ್ದು ಇಂತಹಾ ನಿರ್ಧಾರಗಳಿಂಡ ಎರಡೂ ಕಡೆಗಳಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿ ಯುದ್ಧದಂತಹ ಸನ್ನಿವೇಶವು ಹೇಗೆ ಸ್ಫೋಟಗೊಳ್ಳುತ್ತದೆ ಎಂಬುದನ್ನು ಪ್ರಧಾನಿ ಖಾನ್ ವಿವರಿಸಿದರು. ಭಾರತದ ನಿರ್ಣಯದ ವಿರುದ್ಧ ಕಾಶ್ಮೀರಿಗಳು ಪ್ರತಿಭಟನೆ ನಡೆಸಲಿದ್ದು, ಭಾರತ ಅವರ ಮೇಲೆ ದಬ್ಬಾಳಿಕೆ ನಡೆಸಲಿದೆ ಎಂದರು.
"ಪುಲ್ವಾಮಾದಂತಹ ದಾಳಿಗಳು ಮತ್ತೆ ಸಂಭವಿಸಲಿವೆ ಎಂದು ನಾನು ಈಗಾಗಲೇ ಊಹಿಸಬಲ್ಲೆ, ಅವರು ಮತ್ತೆ ನಮ್ಮ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಾರೆ. ಅವರು ಮತ್ತೆ ನಮ್ಮ ಮೇಲೆ ದಾಳಿ ಮಾಡಬಹುದು, ಆಗ ನಾವೂ ಸಹ ಪ್ರತಿದಾಳಿ ಮಾಡುತ್ತೇವೆ. ಆಗ ಯುದ್ಧದಲ್ಲಿ ಯಾರು ಜಯಗಳಿಸುತ್ತಾರೆ?ಯಾರೂ ಅದನ್ನು ಗೆಲ್ಲುವುದಿಲ್ಲ ಮತ್ತು ಅದು ಇಡೀ ಜಗತ್ತಿಗೆ ಇದು ಭೀಕರ ಪರಿಣಾಮಗಳನ್ನು ಉಂಟುಮಾಡಲಿದೆ." 
ಇದೇವೇಳೆ  ಕಾಶ್ಮೀರದ ಪರಿಸ್ಥಿತಿಯನ್ನು ಗಮನಿಸಬೇಕು ಎಂದು ಅವರು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದರು.
SCROLL FOR NEXT