ವಿದೇಶ

370 ಎಫೆಕ್ಟ್: ಭಾರತೀಯ ಚಿತ್ರಳಿಗೂ ನಿಷೇಧ, ಆದ್ರೆ ಸೇನಾ ಕಾರ್ಯಾಚರಣೆ ಇಲ್ಲ ಎಂದ ಪಾಕ್

Lingaraj Badiger
ಇಸ್ಲಾಮಾಬಾದ್: ರಾಜತಾಂತ್ರಿಕ ಸಂಬಂಧ ಬಿಗಾಡಾಯಿಸುತ್ತಿರುವ ನಡುವೆಯೇ ಪಾಕಿಸ್ತಾನ ಗುರುವಾರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಭಾರತೀಯ ಚಿತ್ರಗಳ ಪ್ರದರ್ಶನವನ್ನೂ ನಿಷೇಧಿಸಿದೆ. ಆದರೆ ಭಾರತದ ವಿರುದ್ಧ ಯಾವುದೇ ಸೇನಾ ಕಾರ್ಯಾಚರಣೆ ಕೈಗೊಳ್ಳದಿರಲು ಪಾಕ್ ನಿರ್ಧರಿಸಿದೆ.
ಪಾಕಿಸ್ತಾನ ರಾಜತಾಂತ್ರಿಕ ಮತ್ತು ಕಾನೂನು ಆಯ್ಕೆಗಳ ಬಗ್ಗೆ ಚಿಂತನೆ ನಡೆಸಿದೆ. ಭಾರತದ ವಿರುದ್ಧ ಯಾವುದೇ ಸೇನಾ ಕಾರ್ಯಾಚರಣೆ ಕೈಗೊಳ್ಳುವ ಚಿಂತನೆ ಇಲ್ಲ. ಆದರೆ ಭಾರತ ಕಾಶ್ಮೀರದಲ್ಲಿ ಹೆಚ್ಚುವರಿ 9 ಲಕ್ಷ ಸೈನಿಕರನ್ನು ನಿಯೋಜಿಸಿದೆ. ಇದು ವಿಶ್ವದಲಿಯೇ ಅತಿ ಹೆಚ್ಚು. ಹೀಗಾಗಿ ಪಾಕಿಸ್ತಾನ ಜಾಗರೂಕರಾಗಿರಲು ನಿರ್ಧರಿಸಿದೆ ಎಂದು ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮ್ಮೂದ್ ಖುರೇಷಿ ಅವರು ಹೇಳಿದ್ದಾರೆ.
ಭಾರತ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿದ ಪರಿಣಾಮ ಈಗಾಗಲೇ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿರುವ ಪಾಕಿಸ್ತಾನ ಈಗ ಲಾಹೋರ್- ದೆಹಲಿ ನಡುವಿನ ಸಂಜೋತಾ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ರದ್ದುಗೊಳಿಸಿದೆ ಮತ್ತು ಭಾರತೀಯ ಚಿತ್ರಳಿಗೂ ನಿಷೇಧ ಹೇರಿದೆ.
ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಯಾವುದೇ ಭಾರತೀಯ ಚಲನಚಿತ್ರಗಳು ಪ್ರದರ್ಶನಗೊಳ್ಳುವುದಿಲ್ಲ ಎಂದು ಪ್ರಧಾನಿ ಅವರ ಅಪ್ತ ಸಹಾಯಕ ಡಾ.ಫಿರ್ದೌಸ್ ಆಶಿಕ್ ಅವನ್ ಹೇಳಿದ್ದಾರೆ.
ಸಂಸತ್ತಿನ ಹೊರೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಆಶಿಕ್, ಪಾಕಿಸ್ತಾನದಲ್ಲಿ ಎಲ್ಲಾ ರೀತಿಯ ಭಾರತೀಯ ಸಾಂಸ್ಕೃತಿಕ ಚಟುವಟಿಕೆ ನಿಷೇಧಿಸುವ ನೀತಿಯನ್ನು ಸರ್ಕಾರ ರೂಪಿಸುತ್ತಿದೆ ಎಂದರು.
ನಿನ್ನೆ ರಾಷ್ಟ್ರೀಯ ಭದ್ರತಾ ಸಮಿತಿ(ಎನ್ಎಸ್ ಸಿ) ಸಭೆ ನಡೆಸಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು, ಭಾರತದ ಜೊತೆ ಎಲ್ಲಾ ರಾಜತಾಂತ್ರಿಕ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು.
SCROLL FOR NEXT