ವಿದೇಶ

ಆರ್ಟಿಕಲ್ 370 ರದ್ದತಿ ವಾಪಸ್ ಪಡೆದರೆ..: ಪಾಕಿಸ್ತಾನ ಭಾರತದ ಮುಂದಿಟ್ಟ ಆಫರ್ ಏನು ಗೊತ್ತೇ?

Srinivas Rao BV
ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ರಾಜತಾಂತ್ರಿಕ, ದ್ವಿಪಕ್ಷೀಯ ವಿಷಯಗಳಲ್ಲಿ ಭಾರತದ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿದೆ. 
ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕಠಿಣ ನಿರ್ಧಾರ ತೆಗೆದುಕೊಂಡಿರುವ ಭಾರತದ ವಿರುದ್ಧ ಬುಸುಗುಡುತ್ತಿರುವ ಪಾಕಿಸ್ತಾನ, ಈಗ ಭಾರತಕ್ಕೇ ಆಫರ್ ನೀಡಲು ಮುಂದಾಗಿದೆ. 
ಆರ್ಟಿಕಲ್ 370 ರದ್ದತಿ ನಿರ್ಧಾರವನ್ನು ಭಾರತ ವಾಪಸ್ ಪಡೆದರೆ, ಪಾಕ್ ವಾಯು ಮಾರ್ಗ ಬಳಕೆಗೆ ಭಾರತದ ಮೇಲೆ ನಿಷೇಧ, ಭಾರತೀಯ ಚಿತ್ರ, ಸಂಜೋತಾ ರೈಲು ಸ್ಥಗಿತ, ದ್ವಿಪಕ್ಷೀಯ ವ್ಯಾಪಾರ ಸ್ಥಗಿತ, ರಾಯಭಾರಿ ಉಚ್ಚಾಟನೆ ಸೇರಿದಂತೆ ತಾನು ಭಾರತದ ವಿರುದ್ಧ ಕೈಗೊಂಡಿರುವ ಎಲ್ಲಾ 
ನಿರ್ಧಾರಗಳನ್ನೂ ಮರುಪರಿಶೀಲಿಸಲು ಸಿದ್ಧ ಎಂದು ಪಾಕಿಸ್ತಾನ ಹೇಳಿದೆ.
ಕಾಶ್ಮೀರ ವಿಷಯ ವಿಶ್ವಸಂಸ್ಥೆ ಭದ್ರತಾ ಪರಿಷತ್ ನ ಅಜೆಂಡಾದಲ್ಲಿದೆ, ಕಾಶ್ಮೀರ ವಿವಾದಿತ ಪ್ರದೇಶ ಎಂದು ಹೇಳಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ,  
ಆರ್ಟಿಕಲ್ 370 ರದ್ದತಿ ನಿರ್ಧಾರವನ್ನು ಭಾರತ ವಾಪಸ್ ಪಡೆದರೆ ಮಾತ್ರ ನಾವು ಭಾರತದ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ಮರುಪರಿಶೀಲಿಸುತ್ತೇವೆ ಎಂದು ಹೇಳಿದೆ.
ಭಾರತ ಕಾಶ್ಮೀರಕ್ಕೆ ಸಂಬಂಧಿಸಿದ ನಿರ್ಧಾರವನ್ನು ಮರುಪರಿಶೀಲನೆ ಮಾಡಿದರೆ ನಾವೂ ಭಾರತದ ವಿರುದ್ಧ ಕೈಗೊಂಡ ಕ್ರಮಗಳನ್ನು ಮರುಪರಿಶೀಲನೆ ಮಾಡುತ್ತೇವೆ, ಇಲ್ಲವಾದರೆ ಇಲ್ಲ ಇದನ್ನೆ ಶಿಮ್ಲಾ ಒಪ್ಪಂದವೂ ಹೇಳುತ್ತದೆ ಎಂದ್ದು ಸಚಿವ ಖುರೇಷಿ ಹೇಳಿದ್ದಾರೆ. 
SCROLL FOR NEXT