ವಿದೇಶ

ಕಾಶ್ಮೀರ ಭವಿಷ್ಯವನ್ನು ಪ್ರಧಾನಿ ಇಮ್ರಾನ್ ಖಾನ್ ಮಾರಾಟ ಮಾಡಿದ್ದಾರೆ: ಪಾಕ್ ಪ್ರತಿಪಕ್ಷಗಳ ಆರೋಪ

Nagaraja AB

ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದ ಭವಿಷ್ಯವನ್ನು ಮಾರಾಟ ಮಾಡಿದ್ದಾರೆ ಎಂದು ಪಾಕ್ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್  ಆರೋಪಿಸಿದ್ದಾರೆ.


ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್ -ಇ- ಇನ್ಸಾಫ್  ಪಕ್ಷವು ಭ್ರಷ್ಟಾಚಾರದ ಸುಳ್ಳು ಆರೋಪಗಳ ಮೇಲೆ ಪ್ರತಿಪಕ್ಷದ ಅಗ್ರ ನಾಯಕರನ್ನು ಬಂಧಿಸುವ ಮೂಲಕ ಕಾಶ್ಮೀರ ಸಮಸ್ಯೆಯಿಂದ ಸಾರ್ವಜನಿಕರ ಗಮನವನ್ನು  ಬೇರೆಡೆಗೆ ತಿರುಗಿಸುತ್ತಿದೆ ಎದು ಪಾಕಿಸ್ತಾನ ಮುಸ್ಲಿಂ ಲೀಗ್ ಎನ್ ಅಧ್ಯಕ್ಷರೂ ಆಗಿರುವ ಷರೀಫ್ ಆರೋಪಿಸಿದ್ದಾರೆ.


ಸಂಸತ್ತಿನಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ಉಭಯ ಪಕ್ಷಗಳು, ಈ ಹಿಂದೆ ವಿವಿಧ ಸಂದರ್ಭಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸಲು ಪ್ರಯತ್ನಿಸಿದ್ದವು ಎಂದು ಪರಸ್ಪರ ಆರೋಪ, ಪ್ರತ್ಯಾರೋಪ ನಡೆಸಿದವು.


ಚೌದರಿ ಷುಗರ್ ಮಿಲ್ಸ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ನವಾಜ್ ಷರೀಪ್ ಪುತ್ರಿ ಮರಿಯಂ ನವಾಜ್  ಹಾಗೂ ಅವರ ಸಂಬಂಧಿ ಯೂಸಫ್ ಅಬ್ಬಾಸ್ ಷರೀಫ್ ಅವರನ್ನು  ಇತ್ತೀಚಿಗೆ ಬಂಧಿಸಲಾಗಿತ್ತು.

SCROLL FOR NEXT