ವಿದೇಶ

ಭಾರತದ ಯುದ್ದವಿಮಾನ ಹೊಡೆದುರುಳಿಸಿದ ಇಬ್ಬರು ಪೈಲಟ್ ಗಳಿಗೆ ಪಾಕ್ ಅತ್ಯುನ್ನತ ಸೇನಾ ಪ್ರಶಸ್ತಿ 

Nagaraja AB

ಇಸ್ಲಾಮಾಬಾದ್ : ಫೆಬ್ರವರಿ ತಿಂಗಳಲ್ಲಿ ನಡೆದ ಭಾರತದೊಂದಿಗಿನ ಬಾಹ್ಯಾಕಾಶ ಕಾದಾಟದಲ್ಲಿ ಭಾರತದ ಯುದ್ದ ವಿಮಾನ ಹೊಡೆದುರುಳಿಸಿದ್ದ ಪಾಕಿಸ್ತಾನದ  ವಾಯುಪಡೆಯ ಇಬ್ಬರು ಪೈಲಟ್ ಗಳಿಗೆ ಅತ್ಯುನ್ನತ ಸೇನಾ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 

ಫೆಬ್ರವರಿ 27 ರಂದು ಭಾರತೀಯ ವಾಯುಪಡೆಯ ಪೈಲಟ್  ಅಭಿನಂದನ್ ವರ್ತಮಾನ್ ಚಲಾಯಿಸುತ್ತಿದ್ದ ಯುದ್ದ ವಿಮಾನವನ್ನು ಹೊಡೆದುರುಳಿಸಿದ್ದ ಪಾಕಿಸ್ತಾನದ ವಿಂಗ್ ಕಮಾಂಡರ್ ಮೊಹಮ್ಮದ್ ನೌಮನ್ ಆಲಿಗೆ  ಸಿತಾರ್-ಇ- ಜುರಾತ್  ಹಾಗೂ ಸ್ಕ್ವಾಡ್ರನ್ ಮುಖಂಡ ಹಸನ್ ಮೊಹಮ್ಮದ್ ಸಿದಿಕ್ಕಿಗೆ ತಂಘಾ- ಇ- ಸುಜಾತ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.
 
ಮುಂದಿನ ವರ್ಷ ಮಾರ್ಚ್ 23ರಂದು ನಡೆಯಲಿರುವ ಪಾಕಿಸ್ತಾನದ ದಿನದ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು  ಪಾಕಿಸ್ತಾನ ಸೇನೆ ತಿಳಿಸಿದೆ.    

SCROLL FOR NEXT