ವಿದೇಶ

ಭೂತಾನ್ ಅಭಿವೃದ್ಧಿಯಲ್ಲಿ ಭಾಗವಾಗಿರುವುದು ಭಾರತಕ್ಕೆ ಸಂದ ಗೌರವ- ಪ್ರಧಾನಿ ಮೋದಿ

Nagaraja AB

ಥಿಂಪು: ಭೂತಾನ್ ಅಭಿವೃದ್ಧಿಯಲ್ಲಿ ಪ್ರಕ್ರಿಯೆಯಲ್ಲಿ ಭಾಗವಾಗಿರುವುದು ಭಾರತಕ್ಕೆ ಸಂದ ಗೌರವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಒಪ್ಪಂದಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭೂತಾನ್ ಪ್ರಧಾನಮಂತ್ರಿ ಡಾ. ಲೋಟೆ ಷೇರಿಂಗ್ ಜೊತೆಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಹಿಮಾಲಯ ರಾಷ್ಟ್ರಕ್ಕೆ ಎಲ್ ಪಿಜಿ ಅನಿಲ ಪೂರೈಕೆ ಪ್ರಮಾಣ ಹೆಚ್ಚಳ ಸೇರಿದಂತೆ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಪ್ರಗತಿಯಾಗುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

ಭೂತಾನ್ ದೇಶದ ಐದು ವರ್ಷಗಳ ಯೋಜನೆಗೆ ಸಹಕಾರವನ್ನು ವಿಸ್ತರಿಸುವುದಾಗಿ ಹೇಳಿದ ಮೋದಿ, ಭೂತಾನ್ ನಂತಹ ನೆರೆಯ ರಾಷ್ಟ್ರದೊಂದಿಗೆ ಸ್ನೇಹ ಬೆಳೆಸಲು ಎಲ್ಲ ರಾಷ್ಟ್ರಗಳು ಬಯಸುತ್ತವೆ.ಜನರ ನಡುವಿನ ಗಟ್ಟಿ ಸಂಬಂಧ ಪರಸ್ಪರ ಒಪ್ಪಂದಗಳು ಸದೃಢಗೊಳ್ಳಲು ಪ್ರಮುಖ ಕಾರಣವಾಗಿದೆ. ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಧೀರ್ಘ ಇತಿಹಾಸವಿದೆ. ಮುಂದೆಯೂ ಕೂಡಾ ಹೀಗೆಯೇ ಮುಂದುವರೆಯಲಿದೆ. ನಮ್ಮಗಳ ನಡುವಿನ ಸಂಬಂಧದಲ್ಲಿ ಗಾಢವಾದ ವಿಶ್ವಾಸ ಹೊಂದಿರುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ರೂಪೇ ಕಾರ್ಡ್ ಬಿಡುಗಡೆಗೊಳಿಸಿದ ನರೇಂದ್ರ ಮೋದಿ,  ಡಿಜಿಟಲ್ ಪಾವತಿಗೆ ಇದರಿಂದ ನೆರವು ಸಿಗಲಿದೆ   ವ್ಯಾಪಾರ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸದೃಢ ಒಪ್ಪಂದವೇರ್ಪಟ್ಟಿರುವುದಾಗಿ ತಿಳಿಸಿದರು.

SCROLL FOR NEXT