ವಿದೇಶ

ಕಾಶ್ಮೀರ ವಿವಾದ: ವಿಶ್ವಸಂಸ್ಥೆಯಲ್ಲಿ ಭಾರತ- ಪಾಕ್ ಜುಗಲ್ ಬಂಧಿ, ಪ್ರಧಾನಿ ಮೋದಿ, ಇಮ್ರಾನ್ ಖಾನ್ ಭಾಷಣ..!!

Srinivasamurthy VN

ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲಿರುವ ಉಭಯ ದೇಶಗಳ ಪ್ರಧಾನಿಗಳು

ವಿಶ್ವಸಂಸ್ಥೆ: ಕಾಶ್ಮೀರ ವಿವಾದ ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ತಾನದ ನಡುವೆ ಜುಗಲ್ ಬಂದಿಗೆ ಕಾರಣವಾಗುವ ಸಾಧ್ಯತೆಯಿದೆ.

ಕಾರಣ ಇಷ್ಟೇ, ಮುಂದಿನ ತಿಂಗಳ 27 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯನ್ನುದ್ದೇಶಿಸಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಭಾಷಣ ಮಾಡುವ ಕಾರ್ಯಕ್ರಮ ಬಹುತೇಕ ನಿಗದಿಯಾಗಿದ್ದು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರ ವಿವಾದ ಎರಡೂ ದೇಶಗಳ ನಡುವಿನ ಜುಗಲ್ ಬಂದಿಗೆ ಕಾರಣವಾಗಲಿದೆ ಎನ್ನಲಾಗುತ್ತಿದೆ.

ಇದೇ ಸೆ. 27 ರಂದು ವಿಶ್ವಸಂಸ್ಥೆಯ ಅಧಿವೇಶನ ಉದ್ದೇಶಿಸಿ ಮೋದಿ ಅವರು ಭಾಷಣ ಮಾಡುವ ಸಾಧ್ಯತೆ ಇದೆ. ಈಗಾಗಲೇ ಮೋದಿ ಅವರ ಯಾವ ವಿಚಾರಗಳನ್ನು ಮಾತನಾಡಬೇಕು ಎಂಬ ಬಗ್ಗೆ ಟಿಪ್ಪಣಿ ಮಾಡಿಕೊಂಡಿದ್ದು ಅದರಲ್ಲಿ ಕಾಶ್ಮೀರದ ವಿಷಯ ಪ್ರಮುಖ ಸ್ಥಾನ ಪಡೆದುಕೊಂಡಿದೆ.ಇದರ ಜೊತೆಗೆ ಸುಸ್ಥಿರ ಅಭಿವೃದ್ದಿ , ಜಾಗತಿಕ ಆರೋಗ್ಯಸ್ಥಿತಿ, ಹವಾಮಾನ ಬದಲಾವಣೆ ಕುರಿತು ಮೋದಿ ಮಾತನಾಡಲಿದ್ದಾರೆ ಎನ್ನಲಾಗಿದೆ.

ಸದ್ಯದ ಪ್ರತಿಯ ಆಧಾರದಲ್ಲಿ ಪ್ರಧಾನಿ ಮೋದಿ ಸೆಪ್ಟೆಂಬರ್​ 27ರ ರಾತ್ರಿ 7.30ರಿಂದ 8 ಗಂಟೆಯ ಅವಧಿಯಲ್ಲಿ ಭಾಷಣ ಮಾಡಲಿದ್ದಾರೆ. ಮೋದಿ ಭಾಷಣದಲ್ಲಿ ನಂತರದಲ್ಲಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​​ ಸೇರಿದಂತೆ ಉಳಿದ ಪ್ರಮುಖ ವಿಶ್ವ ನಾಯಕರು ವಿವಿಧ ವಿಷಯದ ಕುರಿತು ಮಾತನಾಡಲಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ ಭಾಷಣಕ್ಕೆ 20 ನಿಮಿಷ ನಿಗದಿಪಡಿಸಲಾಗಿದ್ದು, ಕಾಶ್ಮೀರದ ಮಾನವ ಹಕ್ಕು ಉಲ್ಲಂಘನೆ, ಹವಾಮಾನ ಬದಲಾವಣೆ ಸೇರಿದಂತೆ ಕೆಲ ಪ್ರಮುಖ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎನ್ನಲಾಗಿದೆ.

ಕಾಶ್ಮೀರದ ವಿಚಾರವನ್ನು ಚರ್ಚಿಸಲು ಜಿನೇವಾದಲ್ಲಿ ಸೆಪ್ಟೆಂಬರ್​ 9ರಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಸಭೆ ನಡೆಯಲಿದ್ದು, ಇದಕ್ಕಾಗಿ ಪಾಕಿಸ್ತಾನ ತನ್ನ ಮಿತ್ರರಾಷ್ಟ್ರಗಳಾದ ಅಮೆರಿಕ ಹಾಗೂ ಚೀನಾದ ಸಹಾಯ ಕೋರಿದೆ.
 

SCROLL FOR NEXT