ಪ್ರಧಾನಿ ನರೇಂದ್ರ ಮೋದಿ ಇದ್ದ Man vs Wild ಸಂಚಿಕೆಯಿಂದ ಹೊಸ ದಾಖಲೆ ನಿರ್ಮಾಣ: ಡಿಸ್ಕವರಿ ವಾಹಿನಿ 
ವಿದೇಶ

ಪ್ರಧಾನಿ ನರೇಂದ್ರ ಮೋದಿ ಇದ್ದ Man vs Wild ಸಂಚಿಕೆಯಿಂದ ಹೊಸ ದಾಖಲೆ ನಿರ್ಮಾಣ: ಡಿಸ್ಕವರಿ ವಾಹಿನಿ

ಡಿಸ್ಕವರಿ ಚಾನಲ್ ನ ಜನಪ್ರಿಯ ಶೋ Man vs Wild ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ಸಂಚಿಕೆ ಹೊಸ ದಾಖಲೆಯನ್ನು ನಿರ್ಮಿಸಿದೆ. 

ಡಿಸ್ಕವರಿ ಚಾನಲ್ ನ ಜನಪ್ರಿಯ ಶೋ Man vs Wild ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ಸಂಚಿಕೆ ಹೊಸ ದಾಖಲೆಯನ್ನು ನಿರ್ಮಿಸಿದೆ. 

ಬೇರ್ ಗ್ರಿಲ್ಸ್ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರಿದ್ದ ಸಂಚಿಕೆ 3.69 ಮಿಲಿಯನ್ ಇಪ್ರೆಷನ್ ಗಳನ್ನು ಪಡೆದಿದ್ದು ಹೊಸ ದಾಖಲೆಯನ್ನು ನಿರ್ಮಿಸಿದೆ ಎಂದು ಡಿಸ್ಕವರಿ ವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ. ಬಿಎಆರ್ ಸಿ ಡಾಟಾವನ್ನು ಡಿಸ್ಕವರಿ ಉಲ್ಲೇಖಿಸಿದ್ದು, ಕಳೆದ ನಾಲ್ಕು ವಾರಗಳಲ್ಲಿ ಈ ಶೋ ನ್ನು ವೀಕ್ಷಿಸಿದವರ ಸಂಖ್ಯೆಗಿಂತ 15 ಪಟ್ಟು ಹೆಚ್ಚಿನ ವೀಕ್ಷಕರು ಪ್ರಧಾನಿ ಮೋದಿ ಅವರಿದ್ದ ಸಂಚಿಕೆಯನ್ನು ವೀಕ್ಷಿಸಿದ್ದಾರೆ ಎಂದು ಹೇಳಿದೆ. 

ಪ್ರಧಾನಿ ಮೋದಿ ಅವರಿದ್ದ ಪ್ರೀಮಿಯರ್ ಸ್ಲಾಟ್ ನ ಸಂಚಿಕೆಯಿಂದ  ಉಳಿದ ಇನ್ಫೋಟೈನ್ಮೆಂಟ್ ಚಾನಲ್ ಗಳ ಪೈಕಿ ಡಿಸ್ಕವರಿಗೆ ಶೇ.93 ರಷ್ಟು ಚಾನಲ್ ಷೇರು ದೊರೆತಿದೆ.  ಪ್ರಧಾನಿ ಮೋದಿ ಅವರ ಸಂಚಿಕೆಯಿಂದ ದೊರೆತ ಯಶಸ್ಸಿಗೆ ಅತೀವ ಸಂತಸ ವ್ಯಕ್ತಪಡಿಸಿರುವ ಡಿಸ್ಕವರಿ, ಭಾರತದಲ್ಲಿ ಹುಲಿ ಸಂರಕ್ಷಣೆಗೆ ದೇಣಿಗೆ ನೀಡುವುದಾಗಿ ಘೋಷಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್