ಸಂಗ್ರಹ ಚಿತ್ರ 
ವಿದೇಶ

ಮೋದಿ ಆರಂಭಿಸಿದ್ದಾರೆ.. ನಾವು ಕೊನೆಗಾಣಿಸುತ್ತೇವೆ: ಪಾಕಿಸ್ತಾನ

ಭಾರತದ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದಾರೆ..ಆದರೆ ನಾವು ಕೊನೆಗಾಣಿಸುತ್ತೇವೆ ಎಂದು ಪಾಕಿಸ್ತಾನ ಸಚಿವ ಫವಾದ್ ಚೌದರಿ ಹೇಳಿದ್ದಾರೆ.

ಭಾರತಕ್ಕೆ ಶಾಶ್ವತವಾಗಿ ವಾಯುಗಡಿ ನಿರ್ಬಂದಿಸುವ ಕುರಿತು ಪ್ರಧಾನಿ ಇಮ್ರಾನ್ ಖಾನ್ ಆಲೋಚನೆ ಎಂದ ಸಚಿವ ಫವಾದ್ ಚೌದರಿ

ಇಸ್ಲಾಮಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದಾರೆ..ಆದರೆ ನಾವು ಕೊನೆಗಾಣಿಸುತ್ತೇವೆ ಎಂದು ಪಾಕಿಸ್ತಾನ ಸಚಿವ ಫವಾದ್ ಚೌದರಿ ಹೇಳಿದ್ದಾರೆ.

ಕಾಶ್ಮೀರ ವಿವಾದದ ಬೆನ್ನಲ್ಲೇ ಭಾರತಕ್ಕೆ ಶಾಶ್ವತವಾಗಿ ತನ್ನ ವಾಯುಗಡಿ ನಿರ್ಬಂಧಿಸುವ ಕುರಿತು ಪಾಕಿಸ್ತಾನ ಸರ್ಕಾರ ಗಂಭೀರ ಚಿಂತನೆಯಲ್ಲಿದೆ ಎಂದು ಚೌದರಿ ಹೇಳಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪಾಕಿಸ್ತಾನ  ಸಚಿವ ಫವಾದ್ ಹುಸೇನ್ ಚೌದರಿ, ಭಾರತಕ್ಕೆ ಶಾಶ್ವತವಾಗಿ ವಾಯುಗಡಿ ನಿರ್ಬಂಧಿಸುವ ಕುರಿತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಗಂಭೀರ ಆಲೋಚನೆಯಲ್ಲಿ ತೊಡಗಿದ್ದಾರೆ. ಈ ಕುರಿತಂತೆ ಪಾಕಿಸ್ತಾನದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದ್ದು, ಕೇವಲ ವಾಯುಗಡಿ ಮಾತ್ರವಲ್ಲದೇ ಭಾರತ ಮತ್ತು ಆಫ್ಘಾನಿಸ್ತಾನದ ನಡುವಿನ ವಾಣಿಜ್ಯ ವ್ಯವಹಾರಕ್ಕಾಗಿಯೂ ಪಾಕಿಸ್ತಾನದ ರಸ್ತೆ ಮಾರ್ಗವನ್ನು ಬಳಸಲಾಗುತ್ತಿದೆ. ಇದನ್ನೂ ಶಾಶ್ವತವಾಗಿ ನಿರ್ಬಂಧಿಸುವ ಕುರಿತು ಚರ್ಚೆ ನಡೆಸಲಾಗಿದೆ. ಈ ಕುರಿತಂತೆ ಇರುವ ಕಾನೂನಾತ್ಮಕ ವಿಚಾರಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ದಿಟ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಅಂತೆಯೇ ಕೊನೆಯಲ್ಲಿ ಮೋದಿ ಆರಂಭಿಸಿದ್ದಾರೆ.. ನಾವು ಕೊನೆಗಾಣಿಸುತ್ತೇವೆ ಎಂದು ಪರೋಕ್ಷವಾಗಿ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಜಾನೆ ಖಾಲಿ? ಇರಾನ್ ಯುದ್ಧಕ್ಕೆ ಹಣ ನೀಡಲು ಅರಬ್ ರಾಷ್ಟ್ರಗಳಿಗೆ ಅಮೆರಿಕ ಒತ್ತಾಯ..: ವೈಟ್ ಹೌಸ್ ಹೇಳಿದ್ದೇನು?

ಭಾರತದ ಮೋಸ್ಟ್ ವಾಂಟೆಂಡ್ ಉಗ್ರ: ಪಾಕಿಸ್ತಾನದಲ್ಲಿ JeM ಭಯೋತ್ಪಾದಕ ಮಸೂದ್ ಅಜರ್‌ನ ಸಹೋದರ ನಿಗೂಢ ಸಾವು!

ಬೆಂಗಳೂರಿನಲ್ಲಿ ದಾರುಣ ಘಟನೆ: ಪತಿ ಆತ್ಮಹತ್ಯೆ ಬೆನ್ನಲ್ಲೇ 17ನೇ ಮಹಡಿಯಿಂದ ಜಿಗಿದು ಪತ್ನಿ ಸಾವು!

ಇರಾನ್‌ನ ಅಣುಕೇಂದ್ರ ಇಸ್ಫಹಾನ್ ಮೇಲೆ ಅಮೆರಿಕ ದಾಳಿ; ದುಬೈ ಕರಾವಳಿಯ ತೈಲ ಟ್ಯಾಂಕರ್‌ ಹೊಡೆದು ಟೆಹ್ರಾನ್ ಪ್ರತೀಕಾರ

body-worn cams ಆಫ್ ಮಾಡಿ, ವಿನಾಕಾರಣ ವಾಹನ ತಡೆದು ಹಣ ವಸೂಲಿ: 3 ಟ್ರಾಫಿಕ್ ಪೊಲೀಸರ ಅಮಾನತು

SCROLL FOR NEXT