ವಿದೇಶ

ಯುದ್ಧೋನ್ಮಾದದಲ್ಲಿರುವ ಪಾಕಿಸ್ತಾನದಿಂದ ಘಜ್ನವಿ ಕ್ಷಿಪಣಿ ಯಶಸ್ವಿ ಉಡಾವಣೆ, ಭಾರತಕ್ಕೆ ಆತಂಕ!

Vishwanath S

ಇಸ್ಲಾಮಾಬಾದ್: ಭಾರತದೊಂದಿಗಿನ ಉದ್ವಿಗ್ನತೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಪಾಕಿಸ್ತಾನಕ್ಕೆ ಮನವಿ ಮಾಡಿದ್ದರು ಸಹ ಇಮ್ರಾನ್ ಖಾನ್ ಬುಧವಾರ ತಡರಾತ್ರಿ ಘಜ್ನವಿ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷಾ ಉಡಾವಣೆ  ನಡೆಸಿದೆ. 

ಭೂಮಿಯಿಂದ ಭೂಮಿಗೆ ಚಿಮ್ಮುವ  290 ಕಿಲೋಮೀಟರ್ ವರೆಗಿನ ಸಿಡಿತಲೆಗ ಹೊತ್ತೊಯ್ಯಬಲ್ಲ ಕ್ಷಿಪಣಿ ಇದಾಗಿದೆ ಎಂದು ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಗುರುವಾರ ತಿಳಿಸಿದೆ.

290 ಕಿ.ಮೀ.ವರೆಗೆ ಅನೇಕ ಬಗೆಯ ಸಿಡಿತಲೆಗಳನ್ನು ತಲುಪಿಸುವ ಸಾಮರ್ಥ್ಯವಿರುವ ಘಜ್ನವಿ ಮೇಲ್ಮೈಯಿಂದ ರಾತ್ರಿಯ ತರಬೇತಿ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತು. ಇದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ವಿಜ್ಞಾನಿಗಳ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ರಾಷ್ಟ್ರವನ್ನು ಅಭಿನಂದಿಸಿದ್ದಾರೆ. 

ಇನ್ನು ಎರಡು ತಿಂಗಳ ಅವಧಿಯಲ್ಲಿ ಭಾರತ -ಪಾಕ್ ಪೂರ್ಣ ಪ್ರಮಾಣದ ಯುದ್ದ ನಡೆಯಲಿದೆ ಪಾಕ್ ರೈಲ್ವೆ  ಸಚಿವ ರಶೀದ್ ಅಹಮದ್ ಹೇಳಿಕೆ ನೀಡಿದ್ದ ಸಮಯದಲ್ಲೇ ಪಾಕ್ ಪರೀಕ್ಷೆ ನಡೆಸಿರುವುದು ಅನುಮಾನಕ್ಕೆ ಎಡೆಮಾಡಿದೆ.

SCROLL FOR NEXT