ಪಾಕ್ ಬಾಕ್ಸರ್ ಅಮೀರ್ ಖಾನ್ ನೀಚ ಬುದ್ಧಿ; ಭಾರತದ 'ಹೀರೋ' ಅಭಿನಂದನ್ ಮಿಮಿಕ್ರಿ ಮಾಡಿರುವ ವಿಡಿಯೋ ವೈರಲ್!
ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಭಾರತದ ಹೀರೋ ಆಗಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಗ್ಗೆ ಪಾಕಿಸ್ತಾನ-ಬ್ರಿಟಿಷ್ ಬಾಕ್ಸರ್ ಅಮೀರ್ ಖಾನ್ ಮಿಮಿಕ್ರಿ ಮಾಡಿರುವ ವಿಡಿಯೋ...
ಇಸ್ಲಾಮಾಬಾದ್: ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಭಾರತದ ಹೀರೋ ಆಗಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಗ್ಗೆ ಪಾಕಿಸ್ತಾನ-ಬ್ರಿಟಿಷ್ ಬಾಕ್ಸರ್ ಅಮೀರ್ ಖಾನ್ ಮಿಮಿಕ್ರಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದಕ್ಕೆ ಭಾರತೀಯರು ಅಮೀರ್ ಗೆ ಸಖತ್ ತಿರುಗೇಟು ನೀಡಿದ್ದಾರೆ.
ಸದ್ಯ ಪಾಕಿಸ್ತಾನದಲ್ಲಿರುವ ಅಮೀರ್ ಖಾನ್ ನಮ್ಮ ಕಾಶ್ಮೀರಿ ಸಹೋದರರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಈ ವಿಡಿಯೋವನ್ನು ಮಾಡಿದ್ದಾರೆ. ವಿಡಿಯೋದಲ್ಲಿ ಅಮೀರ್ ಫೆಂಟಾಸ್ಟಿಕ್ ಟೀ, ಕಾಶ್ಮೀರಿ ಟೀ(ಅದ್ಭುತ ಟೀ, ಕಾಶ್ಮೀರಿ ಟೀ) ಎಂದು ಅಭಿನಂದನ್ ರೀತಿ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಈ ವಿಡಿಯೋವನ್ನು ಪಾಕಿಸ್ತಾನದ ಮೇಜರ್ ಜನರಲ್ ಅಸೀಫ್ ಗಫೂರ್ ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದು ಈ ವಿಡಿಯೋ ಕುರಿತು ಭಾರತೀಯರು ಕಿಡಿಕಾರಿದ್ದಾರೆ.
ಫೆಬ್ರವರಿ 27ರಂದು ಭಾರತದ ಗಡಿ ದಾಟಿ ಒಳ ಬಂದಿದ್ದ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಅಭಿನಂದನ್ ವರ್ಧಮಾನ್ ಅವರು ಸುಖೋಯ್ ಯುದ್ಧ ವಿಮಾನದ ಮೂಲಕ ಹೊಡೆದುರುಳಿಸಿದ್ದರು. ಅಲ್ಲದೆ ಈ ದಾಳಿಯಲ್ಲಿ ತಮ್ಮ ವಿಮಾನ ಪತನಗೊಂಡಿದ್ದರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುರಕ್ಷಿತವಾಗಿ ಉಳಿದಿದ್ದರು.
ಈ ವೇಳೆ ಅಭಿನಂದನ್ ರನ್ನು ವಶಕ್ಕೆ ಪಡೆದಿದ್ದ ಪಾಕ್ ಸೇನೆ ಅವರಿಗೆ ಟೀ ನೀಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.