ವಿದೇಶ

ಅಮೆರಿಕದಲ್ಲಿ ಹಿಟ್ ಅಂಡ್ ರನ್: ಭಾರತದ ಇಬ್ಬರು ವಿದ್ಯಾರ್ಥಿಗಳ ಸಾವು

Srinivasamurthy VN

ವಾಷಿಂಗ್ಟನ್: ಅಮೆರಿಕದಲ್ಲಿ ಸಂಭವಿಸಿದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಭಾರತ ಮೂಲದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕದ ಟೆನ್ನಿಸಿಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಜೂಡಿ ಸ್ಟಾನ್ಲಿ (23 ವರ್ಷ) ಮತ್ತು ವೈಭವ್ ಗೋಪಿಶೆಟ್ಟಿ (26 ವರ್ಷ) ಎಂದು ಗುರುತಿಸಲಾಗಿದೆ.  ಇಬ್ಬರೂ ವಿದ್ಯಾರ್ಥಿಗಳು ಟೆನ್ನಿಸಿ ವಿವಿಯಲ್ಲಿ ಕೃಷಿ ವಿಭಾಗದಲ್ಲಿ ಆಹಾರ ವಿಜ್ಞಾನ ಪದವಿ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಪೊಲೀಸ್ ಮೂಲಗಳು ತಿಳಿಸಿರುವಂತೆ ಟೆನ್ನಿಸಿಯ ಸೌಥ್ ನ್ಯಾಷ್ ವಿಲ್ಲೆಯಲ್ಲಿ ಕಳೆದ ನವೆಂಬರ್ 28ರಂದು ಸಂಭವಿಸಿದ ಅಪಘಾತದಲ್ಲಿ ಈ ಇಬ್ಬರೂ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇಬ್ಬರೂ ಅಂದು ರಾತ್ರಿ  ಕಾರ್ಯಕ್ರಮಕ್ಕೆ ತೆರಳಿ ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಟ್ರಕ್ ವೊಂದು ಇವರಬ್ಬರ ಮೇಲೆ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನು ಅಪಘಾತ ಮಾಡಿದ ಟ್ರಕ್ ಮಾಲೀಕನನ್ನು ಕೂಡ ಪೊಲೀಸರು ಬಂಧಿಸಿದ್ದು, ಬಂಧಿತನನ್ನು 26 ವರ್ಷದ ಡೇವಿಡ್ ಟಾರ್ಸ್ ಎಂದು ಗುರುತಿಸಿದ್ದಾರೆ.

ಅಪಘಾತದ ಬಳಿಕ ಈತ ಪೊಲೀಸರಿಗೆ ಶರಣಾಗಿದ್ದು, ಪೊಲೀಸರ ಯಾವುದೇ ಪ್ರಶ್ನೆಗೂ ಆತ ಈವರೆಗೂ ಉತ್ತರಿಸಿಲ್ಲ ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸೌಥ್ ನ್ಯಾಷ್ ವಿಲ್ಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಸಂತ್ರಸ್ಥರ ಪೊಷಕರಿಗೆ ಮೃತದೇಹಗಳನ್ನು ರವಾನಿಸು ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

SCROLL FOR NEXT