ವಿದೇಶ

ಬಾಹ್ಯಾಕಾಶದಲ್ಲೂ ಅಮೆರಿಕ ಸೇನೆ: ಯುಎಸ್ ಸ್ಪೇಸ್ ಫೋರ್ಸ್ ಗೆ ಟ್ರಂಪ್ ಚಾಲನೆ

Srinivasamurthy VN

ವಾಷಿಂಗ್ಟನ್: ಜಗತ್ತಿನ ಬಲಷ್ಠ ಸೇನಾಪಡೆಯನ್ನು ಹೊಂದಿರುವ ಅಮೆರಿಕ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ತನ್ನ ಸೇನಾಪಡೆಗಳ ವಿಭಾಗಕ್ಕೆ ಮತ್ತೊಂದು ವಿಭಾಗವನ್ನು ಸೇರ್ಪಡೆ ಮಾಡಿಕೊಂಡಿದೆ.

ಹೌದು.. ಅಮೆರಿಕ ಸೇನೆ ಇದೀಗ ತನ್ನ ನೂತನ ಶಾಖೆ ಸ್ಪೇಸ್ ಫೋರ್ಸ್ ಗೆ ಚಾಲನೆ ನೀಡಿದೆ. ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಮೊದಲ ಬಾಹ್ಯಾಕಾಶ ಸೇನೆಗೆ ಚಾಲನೆ ನೀಡಿದ್ದಾರೆ. 2020 ನ್ಯಾಷನಲ್ ಡಿಫೆನ್ಸ್​ ಆಥರೈಸೇಷನ್ ಆ್ಯಕ್ಟ್​​ಗೆ ಅಧ್ಯಕ್ಷರೂ ಕೂಡ ಆಗಿರುವ ಡೊನಾಲ್ಡ್​ ಟ್ರಂಪ್ ಈ ಸೇನಾ ಚಾಲನಾ ಪ್ರಮಾಣಪತ್ರಕ್ಕೆ ಸಹಿ ಹಾಕಿದ್ದು, ಬಾಹ್ಯಾಕಾಶ ಪಡೆ ಸ್ಥಾಪನೆಗೆ ಅನುಮತಿ ನೀಡಿದ್ದಾರೆ. ಆ ಮೂಲಕ ಬಾಹ್ಯಾಕಾಶ ಪಡೆಯು ಅಮೆರಿಕದ ಸಶಸ್ತ್ರ ಪಡೆಗಳ ಆರನೇ ಶಾಖೆಯಾಗಲಿದೆ.

ಈ ಕುರಿತಂತೆ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿರುವ ಟ್ರಂಪ್, 'ಕಳೆದ ರಾತ್ರಿ ನಾನು ಅತಿದೊಡ್ಡ ರಕ್ಷಣಾ ಮಸೂದೆಗೆ ಸಹಿ ಹಾಕಿದ್ದಕ್ಕೆ ಹೆಮ್ಮೆಪಡುತ್ತೇನೆ. ಅತ್ಯಂತ ಮಹತ್ವದ ಬಾಹ್ಯಾಕಾಶ ಪಡೆ ರಚಿಸಲಾಗಿದೆ. ಹೊಸ ವಿಮಾನಗಳು, ಹಡಗುಗಳು, ಕ್ಷಿಪಣಿಗಳು, ರಾಕೆಟ್‌ಗಳು ಮತ್ತು ಪ್ರತಿಯೊಂದು ರೀತಿಯ ಉಪಕರಣಗಳು ಮತ್ತು ಎಲ್ಲವನ್ನೂ ಅಮೇರಿಕಾದಲ್ಲಿಯೇ ನಿರ್ಮಿಸಲಾಗಿದೆ. ಹೆಚ್ಚುವರಿಯಾಗಿ, ನಾವು ಸರಹದ್ದು ಗೋಡೆಗೆ(ನಿರ್ಮಿಸಲಾಗುತ್ತಿದೆ) ಹಣ ಪಡೆದುಕೊಂಡಿದೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

SCROLL FOR NEXT