ವಿದೇಶ

ಅಮೆರಿಕಾದಲ್ಲಿ ಭಾರತದ ವಿದ್ಯಾರ್ಥಿಗಳ ಬಂಧನ: ಪೇ ಟು ಸ್ಟೇ ಯುಎಸ್ ವೀಸಾ ಅಂದರೇನು?: ಇಲ್ಲಿದೆ ಮಾಹಿತಿ

Srinivas Rao BV
ಅಮೆರಿಕಾದಲ್ಲಿ ಭಾರತದ 129 ವಿದ್ಯಾರ್ಥಿಗಳ ಬಂಧನ ಅಲ್ಲಿನ ಪೇ ಟು ಸ್ಟೇ ಸ್ಕೀಮ್ ನ್ನು ಬಯಲಿಗೆಳೆದಿದೆ. ಪೇಟು ಸ್ಟೇ ಯುಎಸ್ ವೀಸಾ ಅಂದರೇನು ಅದು ಹೇಗೆ ನಡೆಯುತ್ತಿತ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. 
ಅಮೆರಿಕಾದಲ್ಲಿ ವ್ಯಾಸಂಗ ಮಾಡುವುದಕ್ಕೆ ತೆರಳುವ ವಲಸಿಗರಲ್ಲದ ವಿದೇಶಿ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದಿಂದ ಅನುಮತಿ ಪಡೆದ ನಂತರ  ಎಫ್-1, ಎಂ-1 ಜೆ-1 ವೀಸಾಗಳನ್ನು  ಪಡೆಯಬೇಕಾಗುತ್ತದೆ.  ಹೀಗೆ ಎಫ್-1 ವೀಸಾ ಪಡೆದ ವಿದ್ಯಾರ್ಥಿಗಳು ನಿಗದಿಯಾದ  ಮಾನ್ಯತೆ ಪಡೆದ ಕೋರ್ಸ್ ಗಳಿಗೆ ಹಾಜರಾಗಬೇಕಾಗುತ್ತದೆ. ಕೋರ್ಸ್ ಮುಕ್ತಾಯಗೊಂಡ 60 ದಿನಗಳಲ್ಲಿ ಆ ವಿದ್ಯಾರ್ಥಿಗೆ ಉದ್ಯೋಗ ದೊರೆತರೆ ವರ್ಕ್ ವೀಸಾ ಪಡೆದು ಅಮೆರಿಕಾದಲ್ಲೇ ಉಳಿಯುವುದಕ್ಕೆ ಅವಕಾಶ ಇರುತ್ತದೆ. ಒಂದು ವೇಳೆ ಉದ್ಯೋಗ ಸಿಗದೇ ಇದ್ದಲ್ಲಿ ಆತ ಕೋರ್ಸ್ ಮುಕ್ತಾಯಗೊಂಡ 2 ತಿಂಗಳಲ್ಲಿ ದೇಶ ಬಿಡಬೇಕಾಗುತ್ತದೆ. ಇದು ನಿಯಮ. 
ಈ ರೀತಿ ವ್ಯಾಸಂಗ-ಉದ್ಯೋಗದ ನಡುವೆ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಪ್ರಾಯೋಗಿಕ ತರಬೇತಿ (ಸಿಪಿಟಿ) ಅಡಿಯಲ್ಲಿ ಎಫ್-1 ವೀಸಾಗಳನ್ನು ವಿದ್ಯಾರ್ಥಿಗಳಿಗೆ  ನೀಡಲಾಗಿರುತ್ತದೆ. ಆದರೆ  ಅಮೆರಿಕಾದಲ್ಲೇ ಉಳಿದುಕೊಳ್ಳುವುದಕ್ಕಾಗಿ ಅಡ್ಡ ಮಾರ್ಗದಲ್ಲಿ ನೆರವು ನೀಡುವುದಕ್ಕೆ ವಿದ್ಯಾರ್ಥಿಗಳಿಗೆ ಫೇಕ್ ಯೂನಿವರ್ಸಿಟಿಯಿಂದ ಎನ್ ರೋಲ್ಮೆಂಟ್ ಆಫರ್ ಮಾಡಲಾಗುತ್ತಿತ್ತು. ಈ ರೀತಿ ನಕಲಿ ವಿವಿಗಳಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳು ನಿಜಕ್ಕೂ ಯಾವುದೇ ವ್ಯಾಸಂಗದ ಕೋರ್ಸ್ ಗಳನ್ನು ಮಾಡುತ್ತಿರಲಿಲ್ಲ, ತರಗತಿಗಳಿಗೂ ಹಾಜರಾಗುತ್ತಿರಲಿಲ್ಲ. ಇದು ಕೇವಲ ಅಮೆರಿಕಾದಲ್ಲಿರುವುದಕ್ಕೆ ಸಹಕಾರಿಯಾಗುವ ವೀಸಾ ಪಡೆಯುವುದಕ್ಕೆ ಇದ್ದ ದಾರಿಯಷ್ಟೆ.
ಹೀಗೆ ನಕಲಿ ವಿವಿಗಳನ್ನು ದಾಖಲಾತಿ ಪಡೆದಿದ್ದ 129 ಭಾರತೀಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ನಕಲಿ ವಿವಿಗಳು ಅಮೆರಿಕಾದಲ್ಲಿ ಉಳಿದುಕೊಳ್ಳುವುದಕ್ಕೆ ಹಣ ಪಡೆದು ನೀಡುತ್ತಿದ್ದ ದಾಖಲಾತಿಗಳೇ ಪೇ ಟು ಸ್ಟೇ( ಉಳಿದುಕೊಳ್ಳುವುದಕ್ಕೆ ಪಾವತಿಸುವ ಸ್ಕೀಂ) ಎಂಬ ಹಗರಣ ಎಂಬುದು ಬಹಿರಂಗವಾಗಿದೆ. ಆದರೆ ವಲಸೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಇವು ನಕಲಿ ವಿವಿ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 
SCROLL FOR NEXT