ವಿದೇಶ

ಫೆ.19ರಂದು ಜಾಧವ್ ವಿರುದ್ಧದ ಎಲ್ಲ ಸಾಕ್ಷಿಗಳನ್ನು ಐಸಿಜೆಗೆ ಸಲ್ಲಿಸುತ್ತೇವೆ: ಪಾಕ್ ವಿದೇಶಾಂಗ ಸಚಿವ

Raghavendra Adiga
ಇಸ್ಲಾಮಾಬಾದ್: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಪಾಕಿಸ್ತಾನದಲ್ಲಿ "ಗೂಢಚಾರಿಕೆ" ಆರೋಪದಲ್ಲಿ ಬಂಧಿತರಾಗಿರುವ  ಕುಲಭುಷಣ್ ಜಾಧವ್ ಅವರ "ವಿಧ್ವಂಸಕ ಚಟುವಟಿಕೆಗಳ" ಕುರಿತ ಎಲ್ಲಾ ಸಾಕ್ಷ್ಯಗಳನ್ನು ಫೆಬ್ರವರಿ 19ರಂದು ಇಂಟರ್ ನ್ಯಾಶನಲ್ ಕೋರ್ಟ್ ಆಫ್ ಜಸ್ಟಿಸ್ (ಐಸಿಜೆ) ಪಾಕಿಸ್ತಾನ ಹಸ್ತಾಂತರಿಸಲಿದೆ ಎಂದು ಪಾಕ್ ವಿದೇಶಾಂಗ ಸಚಿವ  ಷಾ ಮಹಮ್ಮದ್ ಖುರೇಷಿ  ಹೇಳಿದ್ದಾರೆ.
ಏಪ್ರಿಲ್ 2017ರಲ್ಲಿ ಪಾಕ್ ನಲ್ಲಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಭಾರತ ಮೂಲದ ಜಾಧವ್ ಗೆ ಪಾಕಿಸ್ತಾನಿ ಮಿಲಿಟರಿ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ. ಆದರೆ ಭಾರತ ಪಾಕ್ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಐಸಿಜೆ ಮೊರೆ ಹೋಗಿತ್ತು. ಆ ಕುರಿತು ವಿಚಾರಣೆ ನಡೆಸಿದ ಅಂತರಾಷ್ಟ್ರೀಯ ನ್ಯಾಯಾಲಯ ಜಾಧವ್ ಗೆ ನೀಡಲಾಗಿದ ಮರಣದಂಡನೆ ಶಿಕ್ಷೆಗೆ ತಡೆ ನೀಡಿದೆ. ತಾನು ಅಂತಿಮ ತೀರ್ಪು ನೀಡುವವರೆಗೆ ಶಿಕ್ಷೆ ಜಾರಿ ಮಾಡದಂತೆ ಐಸಿಜಿ ಪಾಕಿಸ್ತಾನಕ್ಕೆ ನಿರ್ದೇಶಿಸಿದೆ.
ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಇದಾಗಲೇ  ತಮ್ಮ ವಿವರವಾದ ಮನವಿಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ವಿಶ್ವ ನ್ಯಾಯಾಲಯದಲ್ಲಿ ಸಲ್ಲಿಸಿದ್ದು ಐಸಿಜೆ ಇದೇ ಫೆಬ್ರವರಿ 18-21ರ ನಡುವೆ ಪ್ರಕರಣದ ವಿಚಾರಣೆ ನಡೆಸಲು ತೀರ್ಮಾನಿಸಿದೆ.
ಜಾಧವ್ ಮೇಲಿನ ಎಲ್ಲಾ ಆರೋಪಗಳನ್ನು ಭಾರತ ತಿರಸ್ಕರಿಸಿದೆ.ಅಲ್ಲದೆ ಜಾಧವ್ ಅವರನ್ನು ಇರಾನ್ ನಿಂದ ಅಪಹರಿಸಲಾಗಿದೆ. ಭಾರತ ನೌಕಾದಳದಿಂಡ ನಿವೃತ್ತರಾದ ಬಳಿಕ ಅವರು ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದರೆನ್ನುವ ಆರೋಪ ಶುದ್ದ ಸುಳ್ಳು, ಅವರಿಗೆ ಹಾಗೂ ಭಾರತ ಸರ್ಕಾರಕ್ಕೆ ಯಾವ ಸಂಬಂಧವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಐಜೆಜೆಗೆ ಸಲ್ಲಿಸಿದ ಅರ್ಜಿಯಲ್ಲಿ ಪಾಕಿಸ್ತಾನವು ಜಾಧವ್ ಅವರು ಸಾಮಾನ್ಯ ವ್ಯಕ್ತಿಯಾಗಿದ್ದು, ಅವರು ಬೇಹುಗಾರಿಕೆ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಪಾಕಿಸ್ತಾನ ಪ್ರವೇಶಿಸಿದ್ದಾರೆ ಎಂದಿದೆ.
SCROLL FOR NEXT