ವಿದೇಶ

ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ವೆಬ್ ಸೈಟ್ ಹ್ಯಾಕ್!

Raghavendra Adiga
ಇಸ್ಲಾಮಾಬಾದ್: ಪುಲ್ವಾಮಾ ಉಗ್ರ ದಾಳಿ ನಡೆದು ಎರಡು ದಿನಗಳ ಬಳಿಕ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕೃತ ವೆಬ್ ಸೈಟ್ ಶನಿವಾರ ಹ್ಯಾಕ್ ಆಗಿದೆ ಎಂದು ವರದಿಯಾಗಿದೆ.

ಬಹಳಷ್ಟು ರಾಷ್ಟ್ರಗಳ ಬಳಕೆದಾರರಿಂದ ಸೈಟ್ ಗೆ ಪ್ರವೇಶಿಸಲಾಗದ ಬಗೆಗೆ ನಾವು ದೂರು ಸ್ವೀಕರಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ತಿಳಿಸಿದ್ದಾರೆ. ಇದೇ ವೇಳೆ ಈ ಸೈಬರ್ ದಾಳಿಯನ್ನು ಭಾರತದಿಂದ ನಡೆಸಲಾಗಿದೆ ಎಂದು ಡಾನ್ ಗೆ ಮೂಲಗಳಿಂದ ವರದಿಯಾಗಿದೆ.

"ಐಟಿ ತಂಡವು ಹ್ಯಾಕರ್ಸ್ ಆಕ್ರಮಣವನ್ನು ತಡೆಗಟ್ಟುವಲ್ಲಿ ಈಗಕ್ರಮತೆಗೆದುಕೊಂಡಿದೆ’ ಎಂದು  ಡಾನ್ ವರದಿ ಮಾಡಿದೆ.ಈ ನಡುವೆ ಪಾಕಿಸ್ತಾನದಲ್ಲಿ ಯಾವುದೇ ತೊಂದರೆಗಳಿಲ್ಲದೆ ವಿದೇಶಾಂಗ ಸಚಿವಾಲಯದ ವೆಬ್ ಸೈಟ್  ಕಾರ್ಯನಿರ್ವಹಿಸುತ್ತಿದೆ ಎಂದು ಫೈಸಲ್ ಹೇಳಿದರು.  ಆದಾಗ್ಯೂ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಯುನೈಟೆಡ್ ಕಿಂಗ್ ಡಮ್, ನೆದರ್ಲ್ಯಾಂಡ್ ನಂತಹಾ ರಾಷ್ಟ್ರಗಳಲ್ಲಿ ಳಕೆದಾರರು ಸೈಟ್ ಪ್ರವೇಶಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವೆಬ್ ಸೈಟ್ ಹ್ಯಾಕ್ ಆಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಷ್-ಇ-ಮೊಹಮ್ಮದ್ ಈ ಯುಗ್ರ ದಾಳಿ ಸಂಯೋಜಿಸಿತ್ತು.
SCROLL FOR NEXT