ವಿದೇಶ

ಭಯೋತ್ಪಾದನೆ ಬೆಂಬಲಿಗರು ವಿಶ್ವಸಂಸ್ಥೆ ಕ್ರಮ ಎದುರಿಸಬೇಕು: ಜೈಶ್ ವಿರುದ್ಧ ಸೌದಿ ವಿದೇಶಾಂಗ ಸಚಿವರ ಗುಡುಗು

Srinivas Rao BV
ನವದೆಹಲಿ: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ನಾಯಕ ಮಸೂದ್ ಅಜರ್ ಗೆ ವಿಶ್ವಸಂಸ್ಥೆ ನಿರ್ಬಂಧ ವಿಧಿಸುವ ಪ್ರಯತ್ನದಲ್ಲಿರುವ ಭಾರತಕ್ಕೆ ಸೌದಿ ಅರೇಬಿಯಾ ಬೆಂಬಲ ನೀಡಿದೆ. 
ಮುಂಬೈ, ಪುಲ್ವಾಮ ದಾಳಿಯಂತಹ ಪೈಶಾಚಿಕ ಕೃತ್ಯಗಳನ್ನೆಸಗಿರುವ ಉಗ್ರನ ವಿರುದ್ಧ ಭಾರತ ಎತ್ತಿರುವ ಧ್ವನಿಯನ್ನು ಬೆಂಬಲಿಸುವ ರೀತಿಯಲ್ಲಿ ಸೌದಿ ಅರೇಬಿಯಾ ವಿದೇಶಾಂಗ ಸಚಿವ ಅದೆಲ್-ಅಲ್-ಜುಬೈರ್ ಹೇಳಿಕೆ ನೀಡಿದ್ದಾರೆ. 
ಭಯೋತ್ಪಾದಕರು ಹಾಗೂ ಭಯೋತ್ಪಾದನೆಯನ್ನು ಬೆಂಬಲಿಸುವವರು ವಿಶ್ವಸಂಸ್ಥೆ ಕ್ರಮ ಎದುರಿಸಬೇಕು, ವಿಶ್ವಸಂಸ್ಥೆ ಪಟ್ಟಿಗೆ ಸಂಬಂಧಿಸಿದಂತೆ ಪಾಕ್-ಸೌದಿ ಅರೇಬಿಯಾ ಹೇಳಿಕೆ ನೀಡಿರುವುದು ಮಸೂದ್ ಅಜರ್ ನ್ನು ನಿಷೇಧಿಸುವ ಭಾರತದ ಯತ್ನದ ವಿರುದ್ಧವಾಗಿ ಅಲ್ಲ ಎಂದು ಜುಬೈರ್ ಸ್ಪಷ್ಟಪಡಿಸಿದ್ದಾರೆ.
ಭಾರತ-ಪಾಕಿಸ್ತಾನದ ನಡುವಿನ ವಿಷಯದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಎರಡು ನ್ಯೂಕ್ಲಿಯರ್ ಶಕ್ತಿಗಳ ನಡುವೆ ಯುದ್ಧ ನಡೆಯುವುದನ್ನು ಯಾರೂ ಬಯಸುವುದಿಲ್ಲ, ಇದರಿಂದಾಗಿ ಭಯೋತ್ಪಾದಕರಿಗಲ್ಲದೇ ಬೇರೆ ಯಾರಿಗೂ ಸಹ ಲಾಭವಾಗುವುದಿಲ್ಲ ಎಂದು ಸೌದಿ ಅರೇಬಿಯಾ ವಿದೇಶಾಂಗ ಸಚಿವರು ಹೇಳಿದ್ದಾರೆ. 
SCROLL FOR NEXT