ವಿದೇಶ

ಭಾರತದ ಆರ್ಥಿಕತೆ ಸದೃಢ, ಶೀಘ್ರವೇ 5 ಟ್ರಿಲಿಯನ್ ಡಾಲರ್ ಗೆ ಏರಿಕೆ: ದಕ್ಷಿಣ ಕೊರಿಯಾದಲ್ಲಿ ಪ್ರಧಾನಿ ಮೋದಿ

Srinivas Rao BV
ಸಿಯೋಲ್: ಭಾರತದ ಮೂಲಭೂತ ಆರ್ಥಿಕತೆ ಸದೃಢವಾಗಿದೆ. ದೇಶದ ಆರ್ಥಿಕತೆ ಶೀಘ್ರವೇ 5 ಟ್ರಿಲಿಯನ್ ಡಾಲರ್ ನ್ನು ತಲುಪಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ದಕ್ಷಿಣ ಕೊರಿಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತ-ಕೊರಿಯಾ ಉದ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಮುಕ್ತ ಆರ್ಥಿಕತೆಯಾಗಿರುವ ಭಾರತ ಕಳೆದ 4 ವರ್ಷಗಳಲ್ಲಿ 250 ಬಿಲಿಯನ್ ಡಾಲರ್ ನಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ. ಭಾರತವನ್ನು ಹೊರತುಪಡಿಸಿ ವರ್ಷದಿಂದ ವರ್ಷಕ್ಕೆ ವಿಶ್ವದ ಯಾವುದೇ ದೊಡ್ಡ ಆರ್ಥಿಕತೆಯೂ ಸಹ ಶೇ.7 ರಷ್ಟು ಬೆಳವಣಿಗೆ ಸಾಧಿಸಿಲ್ಲ ಎಂದು ಮೋದಿ ಹೇಳಿದ್ದಾರೆ. 
ಉದ್ಯಮ ಸ್ಥಾಪನೆ ಸರಳೀಕರಣದ ವಿಷಯದಲ್ಲಿ ಭಾರತ 77 ನೇ ರ್ಯಾಂಕಿಂಗ್ ಗೆ ಬಂದಿದೆ. ಮುಂದಿನ ವರ್ಷ ಟಾಪ್  50ರಲ್ಲಿ ಭಾರತ ಇರಲಿದೆ. ಭಾರತ ಅವಕಾಶದ ಆಗರವಾಗಿದ್ದು, ಸರ್ಕಾರ ಇದಕ್ಕೆ ಸಪೋರ್ಟ್ ಸಿಸ್ಟಂ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಮೋದಿ ಸಿಯೋಲ್ ನ ಉದ್ಯಮಿಗಳನ್ನುದ್ದೇಶಿಸಿ ಹೇಳಿದ್ದಾರೆ.
SCROLL FOR NEXT