ವಿದೇಶ

ಹಫೀಜ್ ಸಯೀದ್ ಜಮಾತ್-ಉದ್-ದವಾ, ಅದರ ಚಾರಿಟಿಗೆ ಪಾಕ್ ನಿಷೇಧ

Lingaraj Badiger
ಇಸ್ಲಾಮಾಬಾದ್: ಪುಲ್ವಾಮಾ ಉಗ್ರ ದಾಳಿಯ ನಂತರ ಜಾಗತಿಕ ಒತ್ತಡಕ್ಕೆ ಕೊನೆಗೂ ಮಣಿದ ಪಾಕಿಸ್ತಾನ ಸರ್ಕಾರ, 2008ರ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ ಸಂಘಟನೆ ಹಾಗೂ ಅದರ ದತ್ತಿ ಸಂಸ್ಥೆಯಾದ ಫಲಾ-ಇ-ಇನ್ಸಾನಿಯತ್ ಫೌಂಡೇಷನ್ ಅನ್ನು ಗುರುವಾರ ನಿಷೇಧಿಸಿದೆ.
ಇಂದು ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯಲ್ಲಿ ಈ ಸಂಘಟನೆಗಳನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನ ಆಂತರಿಕ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಕೆಲವು ನಿರ್ದಿಷ್ಟ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆಗೆ ವೇಗ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಮಾತ್-ಉದ್-ದವಾ ಮತ್ತು ಫಲಾ ಇ ಇನ್ಸಾನಿಯತ್ ಫೌಂಡೇಷನ್ ನ ಕೂಡ ನಿಷೇಧಿಸುವ ಸಂಘಟನೆಯಲ್ಲಿ ಗುರುತಿಸಲಾಗಿದೆ. ಇದಕ್ಕೂ ಮುನ್ನ ಆಂತರಿಕ ಸಚಿವಾಲಯವು ಈ ಸಂಘಟನೆಗಳ ಬಗ್ಗೆ ನಿಗಾ ವಹಿಸಿತ್ತು.
ಭದ್ರತಾ ಸಮಿತಿ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ರಾಷ್ಟ್ರೀಯ ಕಾರ್ಯಾಚರಣೆ ಏನು ಎಂಬ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಿತು. ವಿವಿಧ ತನಿಖಾ ಸಂಸ್ಥೆ ಮುಖ್ಯಸ್ಥರು ಹಾಗೂ ಪ್ರಮುಖ ಸಚಿವರು ಹಾಜರಿದ್ದರು.
SCROLL FOR NEXT