ಪರ್ವೇಜ್ ಮುಷರಪ್ 
ವಿದೇಶ

ಪಾಕಿಸ್ತಾನದಿಂದ ಭಾರತ ಮೇಲೆ ಪರಮಾಣು ದಾಳಿ ಆಗಲ್ಲ- ಮುಷರಫ್

ಎರಡು ಪರಮಾಣು ರಾಷ್ಟ್ರಗಳ ನಡುವಿನ ಸಂಬಂಧ ಅಪಾಯದ ಹಂತ ತಲುಪಿದರೆ ಪಾಕಿಸ್ತಾನ ಭಾರತದ ಮೇಲೆ ಪರಮಾಣು ದಾಳಿ ನಡೆಸಲಿದೆ ಎಂಬ ಪ್ರಸ್ತಾವವನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ನಿರಾಕರಿಸಿದ್ದಾರೆ.

ಅಬುದಾಬಿ:  ಎರಡು ಪರಮಾಣು ರಾಷ್ಟ್ರಗಳ ನಡುವಿನ  ಸಂಬಂಧ ಅಪಾಯದ ಹಂತ ತಲುಪಿದರೆ ಪಾಕಿಸ್ತಾನ ಭಾರತದ ಮೇಲೆ ಪರಮಾಣು ದಾಳಿ ನಡೆಸಲಿದೆ ಎಂಬ ಪ್ರಸ್ತಾವವನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್  ನಿರಾಕರಿಸಿದ್ದಾರೆ.

ಒಂದು ವೇಳೆ ಪಾಕಿಸ್ತಾನ  ಭಾರತದ ಮೇಲೆ ಒಂದು ಅಟೋಮಿಕ್ ಬಾಂಬ್ ಹಾಕಿದ್ದರೆ ಭಾರತ 20 ಬಾಂಬ್ ಗಳನ್ನು ಹಾಕಿ ನಮ್ಮನ್ನು ನಿರ್ನಾಮ ಮಾಡಲಿದೆ ಎಂದು ಅವರು ಹೇಳಿದ್ದಾರೆ ಎಂದು  ಡಾನ್ ಪತ್ರಿಕೆ ವರದಿ ಮಾಡಿದೆ.

ಅಬುದಾಬಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಷರಫ್, ಭಾರತ ಮತ್ತು ಪಾಕಿಸ್ತಾನದ ಸಂಬಂಧ ಮತ್ತೆ ಅಪಾಯದ ಹಂತ ತಲುಪಿದೆ. ಯಾವುದೇ ಪರಮಾಣು ದಾಳಿ ನಡೆಯಲ್ಲ, ಒಂದು ವೇಳೆ ನಾವು ಒಂದು ಅಟೋಮಿಕ್ ಬಾಂಬ್  ಹಾಕಿದರೆ, ಭಾರತ ನಮ್ಮ ಮೇಲೆ 20 ಬಾಂಬ್ ಗಳನ್ನು ಹಾಕಲಿದೆ. ಆದ್ದರಿಂದ ನಾವು ಅವರ ಮೇಲೆ ಮೊದಲು 50 ಬಾಂಬ್ ಗಳನ್ನು ಹಾಕಬೇಕು, ಅದರಿಂದ ಮೊದಲು 50 ಬಾಂಬ್ ಗಳನ್ನು ಹಾಕಲು ಪಾಕಿಸ್ತಾನ ಸಿದ್ದ ಇದೆಯಾ?  ಎಂದು ಕೇಳಿದ್ದಾರೆ.

ಪಾಕಿಸ್ತಾನದೊಂದಿಗೆ ಇಸ್ರೇಲ್ ಸಂಬಂಧ ವೃದ್ದಿಯಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟಿರುವ ಮುಷರಫ್, ಪಾಕಿಸ್ತಾನದಲ್ಲಿನ ರಾಜಕೀಯ ಪರಿಸ್ಥಿತಿ ಉತ್ತಮವಾಗಿದೆ. ಅರ್ಧದಷ್ಟು ಸಚಿವರು ನಮ್ಮವರಾಗಿದ್ದಾರೆ. ಕಾನೂನು ಸಚಿವ ಮತ್ತು ಅಟಾರ್ನಿ ಜನರಲ್ ಅವರು ನಮ್ಮ ವಕೀಲರಾಗಿದ್ದಾರೆ ಎಂದು ಮುಷರಫ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT