ವಿದೇಶ

ನಮ್ಮ ಮೇಲೆ ಅಪಾಯದ ಕತ್ತಿ ತೂಗುತ್ತಿದೆ; ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿ

Sumana Upadhyaya
ಇಸ್ಲಾಮಾಬಾದ್: ಪಾಕಿಸ್ತಾನದ ಒಳಗೆ ನುಗ್ಗಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರರ ಅಡಗುತಾಣದ ಮೇಲೆ ಭಾರತೀಯ ವಾಯುಪಡೆ ಹಠಾತ್ ದಾಳಿ ನಡೆಸಿದ ನಂತರ ತುರ್ತು ಭದ್ರತಾ ಸಭೆ ಕರೆದ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸಿದರು.
ಪಾಕಿಸ್ತಾನದ ಮೇಲೆ ಅಪಾಯದ ಕತ್ತಿ ತೂಗುತ್ತಿದ್ದು ಭಾರತದ ಕಾರ್ಯಾಚರಣೆಗೆ ಪಾಕಿಸ್ತಾನ ಧೈರ್ಯಗೆಡಬಾರದು ಎಂದು ಹೇಳಿದ್ದಾರೆ.
ತಪ್ಪು ಮಾಹಿತಿ ನೀಡಿಜನರನ್ನು ತಪ್ಪುದಾರಿಗೆಳೆಯುವುದಿಲ್ಲ ಮತ್ತು ಭಯ ಹುಟ್ಟಿಸುವುದಿಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಪಾಕಿಸ್ತಾನದ ಮೇಲೆ ಅಪಾಯದ ಕತ್ತಿ ತೂಗುತ್ತಿದೆ. ಹಾಗಾಗಿ ನಾವು ಎಚ್ಚರಿಕೆಯಿದ ಇರಬೇಕು ಎಂದು ಖುರೇಷಿ ಹೇಳಿರುವುದಾಗಿ ಪಾಕ್ ಮಾಧ್ಯಮ ವರದಿ ಮಾಡಿದೆ.
ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ವಾಯಸೇನೆಯಿಂದ ಹಠಾತ್ ದಾಳಿ ನಡೆದು ವರದಿ ಹೊರಬರುತ್ತಿದ್ದಂತೆ ಖುರೇಷಿ ಉನ್ನತ ಮಟ್ಟದ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಮಾಜಿ ಕಾರ್ಯದರ್ಶಿಗಳು ಮತ್ತು ಹಿರಿಯ ರಾಯಭಾರಿಗಳು ಭಾಗವಹಿಸಿದ್ದಾರೆ.
SCROLL FOR NEXT