ವಿದೇಶ

ಬಾಲಕೋಟ್ ವಾಯುದಾಳಿ: ನಾಳೆ ಪಾಕಿಸ್ತಾನ ಜಂಟಿ ಸಂಸತ್ತು ಅಧಿವೇಶನ

Nagaraja AB

ಇಸ್ಲಾಮಾಬಾದ್ : ಅಂತಾರಾಷ್ಟ್ರೀಯ ಗಡಿ ರೇಖೆಯ ಒಳನುಗಿದ್ದ ಉಗ್ರರ ಅಡಗು ತಾಣಗಳ ಮೇಲೆ  ಭಾರತೀಯ ವಾಯುದಾಳಿ ಹಿನ್ನೆಲೆಯಲ್ಲಿ ನಾಳೆ ಪಾಕಿಸ್ತಾನ ಜಂಟಿ ಸಂಸತ್ತು ಅಧಿವೇಶನ ಕರೆಯಲಾಗಿದೆ. ಪಾಕಿಸ್ತಾನ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮೊಹಮ್ಮದ್ ಖಾನ್ ಅವರ ಹೇಳಿದ್ದಾರೆ ಎಂದು ಜಿಯೋ ಟಿವಿ ವರದಿ ಮಾಡಿದೆ.

ಪಾಕಿಸ್ತಾನ ಮುಂದೆ ಕೈಗೊಳ್ಳಬೇಕಾದ  ಕ್ರಮಗಳ ಕುರಿತಂತೆ  ಚರ್ಚೆ ನಡೆಸಲು ಜಂಟಿ ಸಂಸತ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್  ಮತ್ತು ಪಿಪಿಪಿ ಒತ್ತಾಯಿಸಿವೆ.

ಯುದ್ಧದ ಸನ್ನಿವೇಶದಲ್ಲಿದ್ದು, ಸಂಸತ್ತಿನಲ್ಲಿ ಕೂತು ಚರ್ಚಿಸಿದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಾಕಿಸ್ತಾನ ಪೀಪಲ್ ಪಾರ್ಟಿ ಮುಖಂಡ ಖುರ್ಷೀದ್ ಶಾ ಹೇಳಿದ್ದಾರೆ.

ಇದು ರಾಜಕೀಯ ಲಾಭ ಪಡೆಯುವ ಸಂದರ್ಭವಲ್ಲ,  ಎಲ್ಲರೂ ತಮ್ಮ  ಭಿನ್ನಭಿಪ್ರಾಯಗಳನ್ನು ಪಕ್ಕಕಿಟ್ಟು, ದೇಶಕ್ಕಾಗಿ  ಹೋರಾಟ ನಡೆಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇಸ್ಲಾಂಮಿಕ್  ಸಹಕಾರ ಸಂಘಟನೆ ಆಯೋಜಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಮೊದಲ ಬಾರಿಗೆ ಭಾರತದ ವಿದೇಶಾಂಗ ಸಚಿವರಿಗೆ ಗೌರವ ಅತಿಥಿಯಾಗಿ ಭಾಗವಹಿಸಲು ಆಹ್ವಾನಿಸಲಾಗಿತ್ತು, ಆದರೆ, ಅದನ್ನು ಪಾಕಿಸ್ತಾನ  ತಡೆಗಟ್ಟಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ.

SCROLL FOR NEXT