ಭಾರತದ ಹೊಡೆತಕ್ಕೆ ಪತರುಗುಟ್ಟಿದ ಪಾಕಿಸ್ತಾನ: ಯುದ್ಧ ಬೇಡವೆಂದು ದಯನೀಯ ಮನವಿ
ಇಸ್ಲಾಮಾಬಾದ್: ಹುಸಿಯಾದ ಚೀನಾ ಬೆಂಬಲದ ನಿರೀಕ್ಷೆ ಹಾಗೂ ಗಡಿಯಲ್ಲಿ ಭಾರತದ ಸೇನಾ ಸನ್ನದ್ಧತೆಗೆ ಪತರುಗುಟ್ಟಿರುವ ಪಾಕಿಸ್ತಾನ ಈಗ ಯುದ್ಧವೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಹೇಳಿದೆ.
ಇಷ್ಟೆಲ್ಲಾ ಆದರೂ ತನ್ನ ಧಿಮಾಕನ್ನು ಬಿಡದ ಪಾಕಿಸ್ತಾನದ ಸೇನೆ ತಾನು ಬಯಸಿದ್ದರೆ ನಾಗರಿಕರ ಹತ್ಯೆಯಾಗುವಂತೆ ಟಾರ್ಗೆಟ್ ಮಾಡಿ ದಾಳಿ ನಡೆಸಬಹುದಾಗಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ ಎಂದು ಐಎಸ್ ಪಿ ಆರ್ ಮುಖ್ಯಸ್ಥ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾರತದ ವಾಯುಗಡಿಯ ಉಲ್ಲಂಘಿಸಿದ ಬೆನ್ನಲ್ಲೆ ಪಾಕಿಸ್ತಾನದ ಎಫ್-16 ನ್ನು ಭಾರತ ಹೊಡೆದುರುಳಿಸಿದ ಬೆನ್ನಲ್ಲೇ, ಪಾಕಿಸ್ತಾನಕ್ಕೆ ಚೀನಾ ಸಹ ಶಾಕ್ ನೀಡಿ, ಪಾಕಿಸ್ತಾನ ಮೊದಲು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ ಬೆನ್ನಲ್ಲೇ ಪಾಕಿಸ್ತಾನ ಯುದ್ಧವೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಪಾಕಿಸ್ತಾನದ ಸೇನೆಯ ವಕ್ತಾರರು ಹೇಳಿದ್ದಾರೆ.
ಪಾಕಿಸ್ತಾನ ಜವಾಬ್ದಾರಿಯುತ ರಾಷ್ಟ್ರವಾಗಿದ್ದು ಶಾಂತಿ ಬಯಸುತ್ತದೆ. ಪಾಕಿಸ್ತಾನ ತನ್ನ ಸಾಮರ್ಥ್ಯವನ್ನು ತೋರಿಸಲು ಎಫ್-16 ವಿಮಾನ ಬಳಕೆ ಮಾಡಿತ್ತು. ಪಾಕಿಸ್ತಾನ ಯುದ್ಧ ಬಯಸುತ್ತಿಲ್ಲ, ನಮಗೆ ಶಾಂತಿ ಬೇಕಾಗಿದೆ ಎಂದು ಪಾಕಿಸ್ತಾನದ ಜನರಲ್ ಘಫೂರ್ ಹೇಳಿದ್ದಾರೆ.
ಯುದ್ಧ ನೀತಿಗಳು ವಿಫಲವಾದಾಗ ಸಂಭವಿಸುವಂಥಹದ್ದು ಇದನ್ನು ಭಾರತ ಅರ್ಥಮಾಡಿಕೊಳ್ಳಬೇಕಿದೆ, ಯುದ್ಧವನ್ನು ಪ್ರಾರಂಭಿಸುವುದು ಸುಲಭ ಆದರೆ ಮುಕ್ತಾಯಗೊಳಿಸುವುದಲ್ಲ, ಜಗತ್ತಿನಲ್ಲಿ ಯುದ್ಧದ ಮೂಲಕ ಯಾವುದೇ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಪಾಕ್ ಸೇನೆಯ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics