ವಿದೇಶ

ಪಾಕ್ ಜೈಲಿನಲ್ಲಿರುವ 537 ಖೈದಿಗಳ ಪಟ್ಟಿಯನ್ನು ಭಾರತಕ್ಕೆ ನೀಡಿದ ಪಾಕಿಸ್ತಾನ

Raghavendra Adiga
ಇಸ್ಲಾಮಾಬಾದ್: ಪಾಕ್ ಜೈಲಿನಲ್ಲಿರುವ 537 ಭಾರತೀಯ ಕೈದಿಗಳ ಪಟ್ಟಿಯನ್ನು ಪಾಕಿಸ್ತಾನ ಮಂಗಳವಾರ ಭಾರತಕ್ಕೆ ನೀಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ದ್ವಿಪಕ್ಷೀಯ ಒಪ್ಪಂದದ ನಿಬಂಧನೆಗಳ ಅನುಸಾರ ಪಾಕಿಸ್ತಾನ ಈ ಪಟ್ಟಿಯನ್ನು ಭಾರತದೊಡನೆ ಹಂಚಿಕೊಂಡಿದೆ.
ಪಟ್ಟಿಯಲ್ಲಿ  54 ನಾಗರಿಕರು ಮತ್ತು 483 ಮೀನುಗಾರರ ಹೆಸರುಗಳಿದೆ."ಪಾಕಿಸ್ತಾನ ಸರ್ಕಾರ ಮಂಗಳವಾರ ಪಾಕಿಸ್ತಾನದಲ್ಲಿ ಜೈಲುವಾಸ ಅನುಭವಿಸುತ್ತಿರುವ 537 ಭಾರತೀಯ ಕೈದಿಗಳ (54 ನಾಗರಿಕರು ಮತ್ತು 483 ಮೀನುಗಾರರ) ಪಟ್ಟಿಯನ್ನು ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈಕಮಿಷನರ್ ಅವರಿಗೆ ಹಸ್ತಾಂತರಿಸಿದೆ"ವಿದೇಶಾಂಗ ಕಚೇರಿ (ಎಫ್ಒ) ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ಮತ್ತು ಭಾರತ ನಡುವೆ ಮೇ 21, 2008 ರ ಕಾನ್ಸುಲರ್ ಆಕ್ಸಸ್ ಒಪ್ಪಂದ ಏರ್ಪಟ್ಟಿತ್ತು. ಈ ವೇಳೆ ತೆಗೆದುಕೊಳ್ಳಲಾಗಿದ್ದ ನಿರ್ಣಯದ ಅನುಸಾರ ಈ ಮಾಹಿತಿ ವಿನಿಮಯ ನಡೆದಿದೆ.
ಭಾರತದ ಜೈಲಿನಲ್ಲಿರುವ ಪಾಕ್ ಖೈದಿಗಳ ಪಟ್ಟಿಯನ್ನು ದೆಹಲಿಯಲ್ಲಿರುವ ಪಾಕ್ ಹೈಕಮಿಷನರ್ ಜತೆ ಭಾರತ ಹಂಚಿಕೊಳ್ಳಲಿದೆ.
SCROLL FOR NEXT