ಶರತ್ 
ವಿದೇಶ

ಕೇರಳ ವ್ಯಕ್ತಿಗೆ 28 ಕೋಟಿ ರು. ದುಬೈ ಲಾಟರಿ, ಟಾಪ್ 10 ರಲ್ಲಿ 8 ಭಾರತೀಯರಿಗೆ ಜಾಕ್ ಪಾಟ್

ಕೇರಳದ ಶರತ್ ಪುರುಷೋತ್ತಮಾನ್ ಎಂಬುವವರು ದುಬೈನ ಬಿಗ್‌ ಟಿಕೆಟ್‌ ರಾಫೆಲ್‌ ಲಾಟರಿಯಲ್ಲಿ ಬರೋಬ್ಬರಿ 28 ಕೋಟಿ ರುಪಾಯಿ...

ದುಬೈ: ಕೇರಳದ ಶರತ್ ಪುರುಷೋತ್ತಮಾನ್ ಎಂಬುವವರು ದುಬೈನ ಬಿಗ್‌ ಟಿಕೆಟ್‌ ರಾಫೆಲ್‌ ಲಾಟರಿಯಲ್ಲಿ ಬರೋಬ್ಬರಿ 28 ಕೋಟಿ ರುಪಾಯಿ(15 ಮಿಲಿಯನ್ ಯುಎಇ ಧಿರ್ಹಾಮ್ಸ್) ಗೆದ್ದುಕೊಂಡಿದ್ದಾರೆ.
ಅಚ್ಚರಿ ಎಂದರೆ, ಲಾಟರಿ ಗೆದ್ದಿರುವ ಟಾಪ್ 10ರಲ್ಲಿ ಎಂಟು ಮಂದಿ ಭಾರತೀಯರಿದ್ದು, ಈ ಪೈಕಿ ಆರು ಜನ ಕೇರಳದವರಾಗಿದ್ದಾರೆ.
ವರದಿಗಳ ಪ್ರಕಾರ, ಗುರುವಾರ ಬೆಳಗ್ಗೆ ದುಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಾಟರಿ ಎತ್ತಲಾಗಿದ್ದು, 083733 ನಂಬರಿನ ಟಿಕೆಟ್ ಬಿಗ್‌ ಟಿಕೆಟ್‌ ರಾಫೆಲ್‌ ಲಾಟರಿ ಗೆದ್ದುಕೊಂಡಿದೆ.
 083733 ನಂಬರಿನ ಟಿಕೆಟ್ ಹೊಂದಿದ್ದ ಶರತ್ ಅವರಿಗೆ, ನಿಮಗೆ 28 ಕೋಟಿ ರುಪಾಯಿ ಲಾಟರಿ ಹೊಡೆದಿದೆ ಎಂದು ಹೇಳಿದರೆ, ನಂಬಲು ಸಿದ್ಧರಿಲ್ಲದ ಅವರು, ಸರಿ, ನಾನು ವೆಬ್ ಸೈಟ್ ನಲ್ಲಿ ಪರಿಶೀಲಿಸಿ ಹೇಳುತ್ತೇನೆ ಎಂದರು.
ನೀವು 15 ಮಿಲಿಯನ್ ಧಿರ್ಹಾಮ್ಸ್ ಗೆದ್ದಿದ್ದೀರಾ, ಏನು ಅನಿಸುತ್ತಿದ್ದೆ ಎಂದು ಲಾಟರಿ ಸಂಘಟಕರು ಕೇಳಿದರೆ, ಯಾವುದೇ ಉದ್ವೇಗಕ್ಕೆ ಒಳಗಾಗದ ಶರತ್ ಬರೀ ಓಕೆ ಎಂದಷ್ಟೇ ಹೇಳಿದ್ದಾರೆ.
ನಂತರ, ನಾನು ನನ್ನ ಸ್ನೇಹಿತರೊಂದಿಗೆ ಸೇರಿ ಬಿಗ್ ಟಿಕೆಟ್ ಖರೀದಿಸಿದ್ದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಈ ಟಿಕೆಟ್ ಖರೀದಿಸುತ್ತಿದ್ದೆ ಎಂದು ಶರತ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!