ವಿದೇಶ

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಟ್ರಂಪ್ ವಿರುದ್ಧ ಅಮೆರಿಕಾ ಕಾಂಗ್ರೆಸ್ ಪ್ರಥಮ ಹಿಂದೂ ಸದಸ್ಯೆ ತುಳಸಿ ಸ್ಪರ್ಧೆ!

Raghavendra Adiga
ವಾಷಿಂಗ್ಟನ್: 2020ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕಾ ಕಾಂಗ್ರೆಸ್ ಗೆ ಆಯ್ಕೆಯಾಗಿರುವ ಪ್ರಪ್ರಥಮ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಸ್ಪರ್ಧಿಸಲಿದ್ದಾರೆ. ತಾವು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದು ಈ ಸಂಬಂಧ ಇನ್ನೊಂದು ವಾರದೊಳಗೆ ಅಧಿಕೃತ ಘೋಷಣೆ ಮಾಡುತ್ತೇನೆಂದು ಅವರು ಹೇಳಿಕೆ ನೀಡಿದ್ದಾರೆ.
ತುಳಸಿ ಅಮೆರಿಕಾ ಅಧ್ಯಕ್ಷೀಯ ಚುನಆವಣೆಯಲ್ಲಿ ಸ್ಪರ್ಧಿಸಲಿರುವುದು ಖಚಿತವಾಗಿದ್ದು ಈಕೆ ಇದೇ ಚುನಾವಣೆಗೆ ಸ್ಪರ್ಧಿ ಎಂದೆನ್ನಲಾದ ಕಮಲಾ ಹ್ಯಾರೀಸ್ ಅವರ ಎದುರಾಳಿಗಳಾಗಲಿದ್ದಾರೆ.
ಇನ್ನು ಹ್ಯಾರೀಸ್ ತಾಯಿ ಭಾರತೀಯ ಮೂಲದವರಾಗಿದ್ದರೆ ತಂದೆ ಆಫ್ರಿಕನ್ ರಾಷ್ಟ್ರದವರಾಗಿದ್ದಾರೆ. ಆದರೆ ಹ್ಯಾರೀಸ್ ತಾನು ಆಫ್ರಿಕನ್ನರಾಗಿರುವ ಕಾರಣ ಅಮೆರಿಕಾದಲ್ಲಿನ ಭಾರತೀಯರಿಗೆ ಆಕೆಯ ಬಗ್ಗೆ ಅಸಮಾಧಾನವಿದೆ. ಇದೀಗ ಹ್ಯಾರೀಸ್ ಎದುರು ತುಳಸಿ ಅವರು ಸ್ಪರ್ಧಿಸುತ್ತಾರೆ ಎಂದಾದರೆ ಭಾರತೀಯರ ಭಾರೀ ಬೆಂಬಲ ಸಿಗುವ ನಿರೀಕ್ಷೆ ಇದೆ.
37 ವರ್ಷಗಳ ತುಳಸಿ ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಹವಾಯಿ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದಾರೆ. ಈಕೆ ಭಾರತೀಯ ಅಮೆರಿಕನ್ ಆಗಿರದೆ ಹೋದರೂ ಹಿಂದೂ ಎಂಬ ಕಾರಣಕ್ಕೆ ಭಾರತೀಯರಿಗೆ ಪ್ರೀತಿಪಾತ್ರರಾಗಿದ್ದಾರೆ.
SCROLL FOR NEXT