ಭೀಕರ ವಿಡಿಯೋ: ಮಹಿಳಾ ವಿಜ್ಞಾನಿಯನ್ನು ಜೀವಂತವಾಗಿ ತಿಂದು ತೇಗಿದ ದೈತ್ಯ ಮೊಸಳೆ
ಸಂಶೋಧನೆಗೆಂದು ಸಾಕಿದ್ದ 14 ಅಡಿ ಉದ್ದದ ದೈತ್ಯ ಮೊಸಳೆಯೊಂದು 8 ಅಡಿ ಎತ್ತರದ ಗೋಡೆಯನ್ನು ಹಾರಿ ಮಹಿಳಾ ವಿಜ್ಞಾನಿಯನ್ನು ತಿಂದಿರುವ ಭೀಕರ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಸಂಶೋಧನೆಗೆಂದು ಸಾಕಿದ್ದ 14 ಅಡಿ ಉದ್ದದ ದೈತ್ಯ ಮೊಸಳೆಯೊಂದು 8 ಅಡಿ ಎತ್ತರದ ಗೋಡೆಯನ್ನು ಹಾರಿ ಮಹಿಳಾ ವಿಜ್ಞಾನಿಯನ್ನು ತಿಂದಿರುವ ಭೀಕರ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಇಂಡೋನೇಷ್ಯಾದ ಮೊಸಳೆ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 44ರ ಹರೆಯದ ಡೈಸಿ ಟುವೊ ದೈತ್ಯ ಮೊಸಳೆಗೆ ಬಲಿಯಾಗಿರುವ ದುರ್ದೈವಿ. ಇನ್ನು ಮೊಸಳೆ ದಾಳಿ ದೃಶ್ಯವನ್ನು ನೋಡಿದ ಸಹೋದ್ಯೋಗಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬರುವ ವೇಳೆಗೆ ಮೊಸಳೆ ಆಕೆಯ ಅರ್ಧ ದೇಹವನ್ನು ತಿಂದು ಹಾಕಿದೆ.
ಒಟ್ಟಾರೆ 3 ಗಂಟೆಗಳ ಕಾರ್ಯಾಚರಣೆ ಬಳಿಕ ದೈತ್ಯ ಮೊಸಳೆಯನ್ನು ಪೊಲೀಸರು ಸೆರೆ ಹಿಡಿಡಿದಿದ್ದಾರೆ. ಇಂಡೋನೇಷ್ಯಾದಲ್ಲಿ ಮೊಸಳೆಗಳ ಗಾತ್ರ ತುಂಬಾ ದೊಡ್ಡದಾಗಿರುತ್ತದೆ. ಇನ್ನ 2016ರಲ್ಲಿ ರಷ್ಯಾದ ಪ್ರವಾಸಿಗನೊಬ್ಬ ಇಂಡೋನೇಷ್ಯಾದ ಮೊಸಳೆಗೆ ಬಲಿಯಾಗಿದ್ದು ಈ ಘಟನೆ ವಿಶ್ವದಾದ್ಯಂತ ಸುದ್ದಿಯಾಗಿತ್ತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.