ವಿದೇಶ

2020: ರಿಯೋ ಡಿ ಜನೈರೊ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ, ಯುನೆಸ್ಕೋ ಘೋಷಣೆ

Vishwanath S
ಅಮೆರಿಕ: 2020ರ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ ಎಂದು ರಿಯೋ ಡಿ ಜನೈರೊವನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ(ಯುನೆಸ್ಕೋ) ಗುರುತಿಸಿದೆ.
ನಗರ ಅಭಿವೃದ್ಧಿ ವಾಸ್ತುಶಿಲ್ಪ ಮತ್ತು ಸಂಸ್ಕೃತಿ ಪ್ರಚುರ ಪಡಿಸುವಲ್ಲಿ ನಿರ್ಣಾಯಕ ಪಾತ್ರ ಪ್ರದರ್ಶಿಸಿದ್ದ ರಿಯೋ ಡಿ ಜನೈರೊದ ವಾಸ್ತುಶಿಲ್ಫದ ಗುಣಮಟ್ಟ, ವ್ಯಾಪ್ತಿ ಮತ್ತು ಅದರ ಚಟುವಟಿಕೆಗಳ ಮೂಲಕ ಇದನ್ನು ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ ಎಂದು ಗುರುತಿಸಲಾಗಿದೆ ಎಂದು ಯುನೆಸ್ಕೋದ ಸಹಾಯಕ ನಿರ್ದೇಶಕ ಅರ್ನೆಸ್ಟೊ ಒಟ್ಟೊನ್ ಹೇಳಿದ್ದಾರೆ. 
ಪ್ಯಾರಿಸ್ ಮತ್ತು ಮೆಲ್ಬರ್ನ್ ನಗರಗಳನ್ನೇ ಹಿಂದಿಕ್ಕಿ ರಿಯೋ 2020ರ ಜುಲೈನಲ್ಲಿ ನಡೆಯಲಿರುವ ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಆರ್ಕಿಟೆಕ್ಟ್ಸ್(ಯುಐಎ) ವಿಶ್ವ ಕಾಂಗ್ರೆಸ್ 27ನೇ ಆವೃತ್ತಿಗೆ ಆತಿಥ್ಯ ವಹಿಸಲಿದೆ.
SCROLL FOR NEXT