ಟೋಕಿಯೋ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ 113 ವರ್ಷದ ಮಸಾಜೋ ನಾನಕಾ ಜ.20 ರಂದು ಜಪಾನ್ ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಜಪಾನ್ ನ ಉತ್ತರ ಭಾಗದಲ್ಲಿರುವ ಹೊಕ್ಕೈಡೋ ದ್ವೀಪದಲ್ಲಿರುವ ನಿವಾಸದಲ್ಲಿ ಮಸಾಜೋ ನಿಧನರಾಗಿದ್ದಾರೆ. ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯ ಕುಟುಂಬ ಸದಸ್ಯರು ಸುಮಾರು ನಾಲ್ಕು ತಲೆಮಾರಿನಿಂದ ಹಾಟ್ ಸ್ಪ್ರಿಂಗ್ಸ್ ನ್ನು ನಡೆಸುತ್ತಿದ್ದರು. ಮಸಾಜೋ ನಾನಕಾ ಅವರನ್ನು ವಿಶ್ವದ ಅತ್ಯಂತ ಹಿರಿಯ ಜೀವಂತೆ ವ್ಯಕ್ತಿ ಎಂದು ಪ್ರಮಾಣೀಕರಿಸಲಾಗಿತ್ತು.
1905 ರ ಜುಲೈ ನಲ್ಲಿ ಜನಿಸಿದ್ದ ಮಸಾಜೋ ನಾನಕಾಗೆ 5 ಮಕ್ಕಳಿದ್ದರು ಈ ಪೈಕಿ ಮೂವರು ಜೀವಂತವಾಗಿದ್ದಾರೆ.